ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿ ಸಾಲಿನಲ್ಲಿರುವ ರಿಲಯನ್ಸ್ ಕಮ್ಯೂನಿಕೇಶನ್ಸ್, ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿರುವ ಮುಕೇಶ್ ಅಂಬಾನಿ ಕಂಪೆನಿಗೆ ಟೆಲಿಕಾಂ ಟವರ್‌ಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಮಾತುಕತೆಯನ್ನು ಮುಂದುವರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಬಿಲಿಯನೇರ ಉದ್ಯಮಿ ಅನಿಲ್ ಅಂಬಾನಿ ಸಂಚಾಲಿತ ರಿಲಿಯನ್ಸ್ ಕಮ್ಯೂನಿಕೇಶನ್ಸ್, ಈಗಾಗಲೇ ಹಲವು ಆಸಕ್ತ ಕಂಪೆನಿಗಳೊಂದಿಗೆ ಟವರ್ ಗಳ ಮಾರಾಟಕ್ಕಾಗಿ ಚರ್ಚೆ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.
ರಿಲಯನ್ಸ್ ಕಮ್ಯೂನಿಕೇಶನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಅಧಿಕಾರಿಗಳು, ಮೊಬೈಲ್ ಟವರ್ ಮಾರಾಟ ಕುರಿತಂತೆ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ, ಮುಕೇಶ್ ಅಂಬಾನಿ ಸಂಚಾಲಿತ ಟೆಲಿಕಾಂ ಸಂಸ್ಥೆಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ನೀಡಲು ನಿರ್ಧರಿಸಿದೆ ಎಂದು ಕಂಪೆನಿಯ ಅನಾಮಧೇಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್, ನಾಟಕೀಯ ತಿರುವು ಪಡೆದು ಇತ್ತೀಚೆಗೆ ದೇಶಾದ್ಯಂತ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪಡೆದ ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಟೆಲಿಕಾಂ ಕಂಪೆನಿಯನ್ನು ಖರೀದಿಸಿದೆ.