ದೇಶದ ರಫ್ತು ವಹಿವಾಟು ಮೇ ತಿಂಗಳ ಅವಧಿಯಲ್ಲಿ ಶೇ.35ರಷ್ಟು ಏರಿಕೆಯಾಗಿ,16.1 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಹೇಳಿದ್ದಾರೆ.
ಅಮುದು ವಹಿವಾಟು ಕಳೆದ ಮೇ ತಿಂಗಳ ಅವಧಿಯಲ್ಲಿ 27.4 ಬಿಲಿಯನ್ ಡಾಲರ್‌ಗಳಷ್ಟು, ಏರಿಕೆ ಕಂಡಿದೆ. ಕಳೆದ ವರ್ಷದ ಅವಧಿಯಲ್ಲಿ 11.3 ಬಿಲಿಯನ್ ಡಾಲರ್‌ಗಳಾಗಿತ್ತು ಎಂದು ರಾಹುಲ್ ಖುಲ್ಲರ್ ಸಂತಸ ವ್ಯಕ್ತಪಡಿಸಿದ್ದಾರೆ.
ಏಷ್ಯಾದ ಮೂರನೇ ಬಲಾಢ್ಯ ಆರ್ಥಿಕ ರಾಷ್ಟ್ರವಾದ ಭಾರತ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಫ್ತು ವಹಿವಾಟು ಶೇ.15ಕ್ಕೆ ತಲುಪುವ ನಿರೀಕ್ಷೆಯಿದೆ. 2009-10ರ ಅವಧಿಯ ನಿವ್ವಳ ರಫ್ತು ವಹಿವಾಟಿನಲ್ಲಿ ಶೇ.4.7ರಷ್ಟು ಕುಸಿತ ಕಂಡಿತ್ತು ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ದೇಶದ ರಫ್ತು ವಹಿವಾಟು ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ 33 ಬಿಲಿಯನ್ ಡಾಲರ್ ರಫ್ತು ವಹಿವಾಟು ಮಾಡಲಾಗಿದೆ.