ವಿಮೆ ಪಾಲಿಸಿದಾರನು ಅರ್ಜಿಯಲ್ಲಿ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿದಲ್ಲಿ, ವಿಮೆ ಕಂಪೆನಿ ಅಂತಹ ವ್ಯಕ್ತಿಯ ಹಕ್ಕಿನ ಹಣವನ್ನು ತಿರಸ್ಕರಿಸಬಹುದು ಎಂದು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಯಾವುದೇ ವ್ಯಕ್ತಿ ಅರ್ಜಿಯಲ್ಲಿ ಸಲ್ಲಿಸಿದ ದಾಖಲೆಗಳಿಗೆ ತಾವೇ ಜವಾಬ್ದಾರರು ಎಂದು ಸಹಿಹಾಕಿದ್ದರಿಂದ, ಸುಳ್ಳು ಮಾಹಿತಿಗಳಿಗೆ ಅರ್ಜಿದಾರರು ಹೊಣೆಯಾಗಿರುತ್ತಾರೆ. ವಿಮಾ ಕಂಪೆನಿ ಹೊಣೆಯಾಗಿರುವುದಿಲ್ಲ ಎಂದು ಜಿಲ್ಲಾ ಗ್ರಾಹಕ ನ್ಯಾಯಾಲಯ ವೇದಿಕೆ ಮಹತ್ವದ ಆದೇಶ ಹೊರಡಿಸಿದೆ.
ಮತ್ತೊಂದು ಪ್ರಕರಣದಲ್ಲಿ ವಿಮೆ ಪಾಲಿಸಿದಾರನ ಪತ್ನಿ, ಭಾರ್ತಿ ಎಎಕ್ಸ್‌ಎ ಇನ್‌ಶ್ಯೂರೆನ್ಸ್ ಕಂಪೆನಿಗೆ 7.5 ಲಕ್ಷ ರೂಪಾಯಿ ಹಾಗೂ 50,000 ರೂಪಾಯಿ ಪರಿಹಾರ ಧನ ನೀಡುವಂತೆ ಗ್ರಾಹಕ ವೇದಿಕೆಗೆ ಮೇಲ್ಮನವಿ ಸಲ್ಲಿಸಿದ್ದರು. ಗ್ರಾಹಕ ನ್ಯಾಯಾಲಯ ಅರ್ಜಿದಾರರಿಗೆ ಹಣ ಪಾವತಿಸುವಂತೆ ಕಂಪೆನಿಗೆ ಆದೇಶ ನೀಡಿದೆ.