ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದ್ಯುತ್, ಟೆಲಿಕಾಂ ಕ್ಷೇತ್ರಕ್ಕೆ ಮುಕೇಶ್ ಅಂಬಾನಿ ಲಗ್ಗೆ (Mukesh Ambani | ADAG | RIL | Anil ambani)
Bookmark and Share Feedback Print
 
PTI
ದೇಶದ ಖ್ಯಾತ ಉದ್ಯಮಿಗಳಾದ ಅಂಬಾನಿ ಸಹೋದರರು ಸರ್ವೋಚ್ಚ ನ್ಯಾಯಾಲಯದ ಸಲಹೆ ಮೇರೆಗೆ ಸ್ಪರ್ಧಾರಹಿತ ಒಪ್ಪಂದವನ್ನು ರದ್ದುಗೊಳಿಸಿದ ನಂತರ, ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ವಿದ್ಯುತ್ ಹಾಗೂ ಟೆಲಿಕಾಂ ಕ್ಷೇತ್ರದತ್ತ ಗಮನಹರಿಸಿದ್ದು, ಮುಂಬರುವ 10 ವರ್ಷಗಳಲ್ಲಿ 160 ಬಿಲಿಯನ್ ಡಾಲರ್‌ ಮೊತ್ತದ ಕಂಪೆನಿಯಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.

ಅನಿಲ್ ಅಂಬಾನಿ ಸಂಚಾಲಿತ ವಿದ್ಯುತ್ ಸ್ಥಾವರಗಳು ಕಾರ್ಯಾರಂಭ ಮಾಡಿದ ನಂತರ, ಸರಕಾರದ ಹಂಚಿಕೆಯ ನಿಯಮದ ಪ್ರಕಾರ ಅನಿಲ ಪೂರೈಕೆ ಮಾಡಲಾಗುವುದು ಎಂದು ಮುಕೇಶ್ ಅಂಬಾನಿ ಶೇರುದಾರರ 36ನೇ ವಾರ್ಷಿಕ ಸಮಾರಂಭದಲ್ಲಿ ತಿಳಿಸಿದ್ದಾರೆ.
PTI


ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿ, ದೇಶದ ಬೃಹತ್ ಕಂಪೆನಿಗಳಲ್ಲಿ ಸ್ಥಾನಪಡೆದಿದ್ದು, 3.45 ಲಕ್ಷ ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದೆ. ಕಲ್ಲಿದ್ದಲು, ಥರ್ಮಲ್ ಹಾಗೂ ಅಣು ವಿದ್ಯುತ್ ಸ್ಥಾವರ ಹಾಗೂ ಟೆಲಿಕಾಂ ಕ್ಷೇತ್ರದತ್ತ ವಹಿವಾಟು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಏಷ್ಯಾದ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ವೇಗದಿಂದ ಚೇತರಿಕೆಯಾಗುತ್ತಿರುವ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದರು.

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ, 3,70,000 ಕೋಟಿ ರೂಪಾಯಿಗಳ ಮೊತ್ತವನ್ನು ತಲುಪಲು ಮೂರು ದಶಕಗಳನ್ನು ತೆಗೆದುಕೊಂಡಿದೆ. ಆದರೆ, ವಿದ್ಯುತ್ ಹಾಗೂ ಟೆಲಿಕಾಂ ಕ್ಷೇತ್ರಗಳನ್ನು ಪ್ರವೇಶಿಸುತ್ತಿರುವುದರಿಂದ, ಒಂದು ದಶಕದ ಅವಧಿಯಲ್ಲಿ ಬೃಹತ್ ಮೊತ್ತದ ಕಂಪೆನಿಯಾಗಿಸಲು ಪ್ರಯತ್ನಿಸುವುದಾಗಿ ಶೇರುದಾರರಿಗೆ ಮುಕೇಶ್ ಅಂಬಾನಿ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ