ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಷ್ಕರ : ಚೀನಾದಲ್ಲಿ ಟೋಯೋಟಾ ಉತ್ಪಾದನೆ ಸ್ಥಗಿತ (Beijing|China|Honda|Toyota|Tianjin)
Bookmark and Share Feedback Print
 
ಕಾರ್ಮಿಕರ ಹಾಗೂ ಅಡಳಿತ ಮಂಡಳಿಯ ಭಿನ್ನಾಭಿಪ್ರಾಯಗಳಿಂದಾಗಿ ಪ್ಲ್ಯಾಸ್ಟಿಕ್ ವಸ್ತುಗಳ ಸರಬರಾಜು ಕಂಪೆನಿಯಲ್ಲಿ ನೌಕರರು ಮುಷ್ಕರ ಆರಂಭಿಸಿದ್ದರಿಂದ, ಚೀನಾದಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೋಯೋಟಾ ಮೋಟಾರ್ ಕಾರ್ಪೋರೇಶನ್ ಹೇಳಿಕೆ ನೀಡಿದೆ.

ಬೀಜಿಂಗ್‌ ನಗರಕ್ಕೆ ಹತ್ತಿರದಲ್ಲಿರುವ ಟಿಯಾನ್‌ಜಿನ್‌ನಲ್ಲಿರುವ ಘಟಕದಲ್ಲಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದ್ದು,ಸೋಮವಾರದಂದು ಕಾರ್ಮಿಕರು ಕೆಲಸಕ್ಕೆ ಮರಳುವ ಬಗ್ಗೆ ಖಚಿತ ಮಾಹಿತಿಯಿಲ್ಲ.

ಆದರೆ ದಕ್ಷಿಣ ಚೀನಾದಲ್ಲಿರುವ ಘಟಕದಲ್ಲಿ ಪರಿಷ್ಕ್ರತ ವೇತನಕ್ಕೆ ನೌಕರರು ಸಮ್ಮತಿ ಸೂಚಿಸಿದ್ದು, ಕೆಲಸಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ ಎಂದು ಟೋಯೋಟಾ ಅಧಿಕಾರಿಗಳು ತಿಳಿಸಿದ್ದಾರೆ.

ಟಿಯಾನ್‌ಜಿನ್ ಘಟಕದಲ್ಲಿ ವಾರ್ಷಿಕವಾಗಿ 420,000 ವಾಹನಗಳನ್ನು ತಯಾರಿಸಲಾಗುತ್ತದೆ. ವಾರದ ಅವಧಿಗೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟೋಯೋಟಾ ವಕ್ತಾರೆ ರಿರಿಕೊ ಟಕೆವುಚಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ