ಮಾಲ್ದೀವ್ಸ್‌ನ ರಾಜಧಾನಿ ಮಾಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗಾಗಿ ಭಾರತದ ಮೂರು ಕಂಪೆನಿಗಳು ರವಿವಾರದಂದು ಟೆಂಡರ್ ಸಲ್ಲಿಸಲಿವೆ ಎಂದು ಮೂಲಗಳು ತಿಳಿಸಿವೆ.
ದೇಶದ ವಿಮಾನ ನಿಲ್ದಾಣ ಅಭಿವೃದ್ಧಿ ಕ್ಷೇತ್ರದಲ್ಲಿರುವ ಎರಡು ಪ್ರಮುಖ ಕಂಪೆನಿಗಳು ಹಾಗೂ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್ (ಎಡಿಎಜಿ)ಕಂಪೆನಿಗಳು ಬಿಡ್ ಸಲ್ಲಿಸಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮಲೇಷಿಯಾ ಏರ್‌ಪೋರ್ಟ್ಸ್-ಜಿಎಂಆರ್, ಜಿವಿಕೆ-ಫ್ಲಾಗುಫೆನ್ ಜ್ಯೂರಿಚ್ ಎಜಿ, ಮತ್ತು ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್-ಮೆಕ್ಸಿಕೊ ಏರ್‌ಪೋರ್ಟ್ಸ್ ಆಕ್ಸಿಲ್ಲರಿಸ್ ಕನ್ಸೊರ್‌ಟಿಯಾಸ್, ಏರ್‌ಪೋರ್ಟ್ಸ್ ಡೆ ಪ್ಯಾರಿಸ್ ಮತ್ತು ವಿಯನ್ನಾ ಏರ್‌ಪೋರ್ಟ್ ವಿದೇಶಿ ಕಂಪೆನಿಗಳು ಬಿಡ್ ಸಲ್ಲಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಭಾರತದ ಮೂರು ಕಂಪೆನಿಗಳು ಹಾಗೂ ಏರ್‌ಪೋರ್ಟ್ಸ್ ಡೆ ಪ್ಯಾರಿಸ್ ಕಂಪೆನಿಗಳ ನಡುವೆ ಭಾರಿ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಗುರುವಾರದಂದು ಬಿಡ್ ಬಹಿರಂಗವಾಗಲಿದೆ.
ಮಾಲ್ದೀವ್ಸ್ ಸರಕಾರ ಬಿಡ್‌ಗಳನ್ನು ಅಹ್ವಾನಿಸಿದ್ದು, ವಾರ್ಷಿಕವಾಗಿ ಐದು ಲಕ್ಷ ಪ್ರಯಾಣಿಕರ ಹಾಗೂ 12 ವಿಮಾನ ಪಾರ್ಕಿಂಗ್‌ಗಳ ವ್ಯವಸ್ಥೆಯ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಿದ್ದು, 2014ರೊಳಗೆ ನಿಲ್ದಾಣ ಕಾಮಗಾರಿಯನ್ನು ಅಂತ್ಯಗೊಳಿಸಬೇಕಾಗಿದೆ.
ಜಿಎಂಆರ್ ಸಂಸ್ಥೆ, ನವದೆಹಲಿ, ಹೈದ್ರಾಬಾದ್ ಮತ್ತು ಇಸ್ನಾನ್‌ಬುಲ್ ನಗರಗಳಲ್ಲಿರುವ ವಿಮಾನ ನಿಲ್ದಾಣಗಳ ಮೇಲ್ವಿಚಾರಣೆ ನಡೆಸುತ್ತಿದೆ.ಜಿವಿಕೆ ಸಂಸ್ಥೆ ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳ ಮೇಲ್ವಿಚಾರಣೆ ಕಾರ್ಯವನ್ನು ವಹಿಸಿಕೊಂಡಿದೆ.