ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೋಧಿ ರಫ್ತು ನಿಷೇಧ ಹಿಂಪಡೆಯುವುದಿಲ್ಲ:ಪವಾರ್ (Government | Production | Ban | Wheat exports | Sharad Pawar | Agriculture)
Bookmark and Share Feedback Print
 
ಪ್ರಸಕ್ತ ವರ್ಷದ ಅವಧಿಯಲ್ಲಿ ದಾಖಲೆಯ ಉತ್ಪಾದನೆಯಾಗಿದ್ದರೂ ಕಳೆದ ಮೂರು ವರ್ಷಗಳಿಂದ ಹೇರಲಾದ ಗೋಧಿ ರಫ್ತು ನಿಷೇಧವನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಗೋಧಿ ರಫ್ತು ನಿಷೇಧವನ್ನು ಹಿಂದಕ್ಕೆ ಪಡೆಯುವಂತಹ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಕೇಂದ್ರ ಅಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.

ಗೋಧಿ ರಫ್ತು ವಹಿವಾಟಿಗೆ ಕೇಂದ್ರ ಸರಕಾರ 2007ರಲ್ಲಿ ನಿಷೇಧ ಹೇರಲಾಗಿತ್ತು.2006-07ರ ಅವಧಿಯಲ್ಲಿ ಸರಕಾರ ವಿದೇಶಗಳಿಂದ 7.3 ಮಿಲಿಯನ್ ಟನ್ ಗೋಧಿಯನ್ನು ಸರಕಾರ ಅಮುದು ಮಾಡಿಕೊಂಡಿತ್ತು.

ಅಹಾರ ಹಣದುಬ್ಬರ ದರ ಮೇ ತಿಂಗಳಾಂತ್ಯಕ್ಕೆ ಶೇ.16ರಷ್ಟು ಏರಿಕೆ ಕಂಡಿದ್ದು, ಅಹಾರ ಭಧ್ರತೆ ಕಾಯ್ದೆಯನ್ವಯ ಅಹಾರ ಸಂಗ್ರಹದಲ್ಲಿನ ಹೆಚ್ಚಳದ ಅಗತ್ಯತೆಯಿಂದಾಗಿ, ಗೋಧಿ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ