ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ: ಪ್ರತಿ 10ಗ್ರಾಂಗೆ 19,125 ರೂಪಾಯಿ (Gold prices | Bullion market | Silver | Standard gold | New York)
Bookmark and Share Feedback Print
 
ಚಿನ್ನದ ವಹಿವಾಟುದಾರರಿಂದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 125 ರೂಪಾಯಿಗಳ ಏರಿಕೆ ಕಂಡು 19,125 ರೂಪಾಯಿಗಳಿಗೆ ತಲುಪಿದೆ.

ಕೈಗಾರಿಕೋದ್ಯಮಗಳಿಂದ ಬೆಳ್ಳಿಯ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ,ಪ್ರತಿ ಕೆಜಿಗೆ 300 ರೂಪಾಯಿಗಳಷ್ಟು ಏರಿಕೆಯಾಗಿ 30,000 ರೂಪಾಯಿಗಳಿಗೆ ತಲುಪಿದೆ.

ಅಮೆರಿಕದ ಆರ್ಥಿಕತೆ ಚೇತರಿಕೆಯಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ,ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,263.70 ಡಾಲರ್‌ಗಳಿಗೆ ತಲುಪಿ ಏರಿಕೆ ಕಂಡಿದೆ.

ಸ್ಟ್ಯಾಂಡರ್ಡ್ ಚಿನ್ನ (99.9) ಪ್ರತಿ 10 ಗ್ರಾಂಗೆ 125 ರೂಪಾಯಿಗಳ ಏರಿಕೆ ಕಂಡು 19,125 ರೂಪಾಯಿಗಳಿಗೆ ತಲುಪಿದೆ. ಜೂನ್ 8 ರಂದು ಚಿನ್ನದ ದರದಲ್ಲಿ ದಾಖಲೆಯ ಏರಿಕೆಯಾಗಿ 19,220 ರೂಪಾಯಿಗಳಿಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ