ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಎಸ್‌ಎನ್‌ಎಲ್‌ನಿಂದ 99 ರೂ.ಗಳಿಗೆ ಬ್ರಾಡ್‌ಬ್ಯಾಂಡ್ (BSNL| Broadband | BBG Rural USOF 99 plan | BBG Rural USOF 150 | Rural areas)
Bookmark and Share Feedback Print
 
ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್,ಗ್ರಾಮೀಣ ಭಾಗದ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಮಾಸಿಕ ಸ್ಥಿರ ಶುಲ್ಕ 99 ರೂಪಾಯಿಗಳನ್ನು ನಿಗದಿಪಡಿಸಿದೆ.

ಬಿಬಿಜಿ ರೂರಲ್ ಯುಎಸ್‌ಒಎಫ್99ಪ್ಲ್ಯಾನ್ ಯೋಜನೆಯಡಿಯಲ್ಲಿ, ಗ್ರಾಹಕರು 2ಎಂಬಿಪಿಎಸ್ ವೇಗದಲ್ಲಿ 400ಎಂಬಿ ಉಚಿತ ಡೌನ್‌ಲೋಡ್ ಪಡೆಯಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೊಂದು BBG Rural USOF 150 ಪ್ಲ್ಯಾನ್ ಪ್ರಕಾರ, ಬಳಕೆದಾರರು 2ಎಂಬಿಪಿಎಸ್‌ ವೇಗದಲ್ಲಿ 1 ಜಿಬಿ ಉಚಿತ ಡೌನ್‌ಲೋಡ್ ಮಾಡಬಹುದಾಗಿದೆ.

ಬ್ರಾಡ್‌ಬ್ಯಾಂಡ್ ಬಳಕೆಯನ್ನು ಹೆಚ್ಚಿಸಲು ಸರಕಾರ ಭಾರಿ ಪ್ರಯತ್ನಗಳನ್ನು ನಡೆಸಿದ್ದು, ಇದೀಗ 9 ಮಿಲಿಯನ್ ಬ್ರಾಡ್‌ಬ್ಯಾಂಡ್ ಬಳಕೆದಾರರನ್ನು ಸೇರ್ಪಡೆಗೊಳಿಸಿದೆ.

ಬ್ರಾಡ್‌ಬ್ಯಾಂಡ್ ಅಳವಡಿಸಿಕೊಳ್ಳಬೇಕಾದ ಬಳಕೆದಾರರು, ದೂರವಾಣಿ ಸಂಪರ್ಕ ಶುಲ್ಕವನ್ನು ಎರಡು ಪ್ಲ್ಯಾನ್‌ಗಳಲ್ಲಿ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.

ಬೃಹತ್ ಟೆಲಿಕಾಂ ಕಂಪೆನಿಯಾದ ಬಿಎಸ್‌ಎನ್‌ಎಲ್, ಸ್ಥಿರ ದೂರವಾಣಿ ಮತ್ತು ಬ್ರಾಡ್‌ಬ್ಯಾಂಡ್‌ಗೆ ಕೊಂಬೊ ಪ್ಲ್ಯಾನ್‌ಗಳನ್ನು ಕೂಡಾ ಪರಿಚಯಿಸಲಿದೆ.

ಕೊಂಬೊ ವಿಭಾಗದಲ್ಲಿ, ಬಿಎಸ್‌ಎನ್‌ಎಲ್ ಗ್ರಾಮೀಣ ಭಾಗದ ಬಳಕೆದಾರರಿಗೆ 250,550 ಮತ್ತು 500 ರೂಪಾಯಿಗಳ (ಅನಿಯಮಿತ ಪ್ಲ್ಯಾನ್)ನ್ನು ಪಾವತಿಸಿ ಪಡೆಯಬಹುದಾಗಿದೆ.

ಈ ಎಲ್ಲಾ ಯೋಜನೆಗಲಿಗೆ ನೋಂದಾವಣಿ, ಮೋಡಮ್, ಭಧ್ರತಾ ಠೇವಣಿ ಅಥವಾ ಅಳವಡಿಸುವ ಶುಲ್ಕವಿರುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ