ಕಂಪೆನಿಗೆ ನೂತನವಾಗಿ ಸೇರ್ಪಡೆಯಾಗಿರು ಶೇ.40 ರಷ್ಟು ಉದ್ಯೋಗಿಗಳು ಅರೆಪಟ್ಟಣ ಪ್ರದೇಶದವರಾಗಿದ್ದಾರೆ ಎಂದು ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಇನ್ಫೋಸಿಸ್ ಟೆಕ್ನಾಲಾಜೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ನೇಮಕಗೊಂಡ ಶೇ.40ರಷ್ಟು ಉದ್ಯೋಗಿಗಳು ಅರೆಪಟ್ಟಣದಿಂದ ಬಂದವರಾಗಿರುವುದು ಆಶ್ಚರ್ಯ ಹಾಗೂ ಸಂತಸ ತಂದಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಗೋಪಾಲ್‌ಕೃಷ್ಣನ್ ತಿಳಿಸಿದ್ದಾರೆ.
ಅರೆ ಪಟ್ಟಣದಿಂದ ಬಂದ ಉದ್ಯೋಗಿಗಳ ತಂದೆ ತಾಯಿಗಳಲ್ಲಿ ಬಹುತೇಕರು ಹತ್ತನೆ ತರಗತಿ ಕೂಡಾ ಪೂರ್ತಿಗೊಳಿಸಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅರೆಪಟ್ಟಣದಿಂದ ಬಂದಂತಹ ಉದ್ಯೋಗಿಗಳು ಕಂಪೆನಿಗೆ ಸೇರ್ಪಡೆಯಾಗುತ್ತಿರುವುದು ಹೊಸ ಬದಲಾವಣೆ ತಂದಂತಾಗಿದೆ.ಬದಲಾಗುತ್ತಿರುವ ಜೀವನ ಶೈಲಿ ಹೆಚ್ಚಿನ ಮಧ್ಯಮ ವರ್ಗದವರನ್ನು ಸೃಷ್ಟಿಸುತ್ತಿದೆ ಎಂದು ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ವಹಿವಾಟು ವಿಸ್ತರಣೆಗಾಗಿ ಕಂಪೆನಿಗಳು ಗ್ರಾಮೀಣ ಪ್ರದೇಶಕ್ಕೆ ತೆರಳುವ ಅಗತ್ಯವಿಲ್ಲ.ಗ್ರಾಮೀಣ ಪ್ರದೇಶದ ಯುವಕರನ್ನು ನೇಮಕ ಮಾಡಿಕೊಂಡಲ್ಲಿ ಅನುಕೂಲವಾಗುತ್ತದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಗೋಪಾಲ್‌ಕೃಷ್ಣನ್ ತಿಳಿಸಿದ್ದಾರೆ.