ದೇಶದ ಟೆಲಿಕಾಂ ಕ್ಷೇತ್ರದಲ್ಲಿರುವ ಕಾರ್ಬನ್ ಮೊಬೈಲ್ಸ್, ಎರಡು ನೂತನ ಹ್ಯಾಂಡ್‌ಸೆಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಕೆ777 ಮತ್ತು ಕೆ485 ಮಾಡೆಲ್‌ಗಳ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು 4,500 ಮತ್ತು 3,500 ರೂಪಾಯಿಗಳ ದರವನ್ನು ನಿಗದಿಪಡಿಸಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತಷ್ಟು ಮಾಡೆಲ್‌ಗಳ ಹ್ಯಾಂಡ್‌ಸೆಟ್‌ಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಬನ್ ಮೊಬೈಲ್ಸ್ ಮುಖ್ಯಸ್ಥ ಶಾಶಿನ್ ಡೆವಸಾರೆ ತಿಳಿಸಿದ್ದಾರೆ.
ಎರಡು ಮಾಡೆಲ್‌ಗಳ ಮೊಬೈಲ್‌ಗಳು ಡುವೆಲ್ ಸಿಮ್ ವ್ಯವಸ್ಥೆಯನ್ನು ಹೊಂದಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಾರ್ಬನ್ ಮೊಬೈಲ್ ಕಂಪೆನಿ ಜಂಟಿ ಸಹಭಾಗಿತ್ವವನ್ನು ಹೊಂದಿದೆ. ದೆಹಲಿ ಮೂಲದ ಜೈನಾ ಗ್ರೂಪ್ ಮತ್ತು ಬೆಂಗಳೂರು ಮೂಲದ ಯುಟಿಎಲ್ ಗ್ರೂಪ್ ಮಾಲೀಕತ್ವವನ್ನು ಹೊಂದಿವೆ.