ವಹಿವಾಟಿನಲ್ಲಿ ಕುಸಿತ ಕಂಡಿರುವ ಐಟಿಸಿ ಸಂಸ್ಥೆ, ದೇಶದ ಸಿಗರೇಟು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಲು, ಜಾಗತಿಕ ಮಟ್ಟದ ಬ್ರ್ಯಾಂಡ್ 'ಲಕ್ಕಿ ಸ್ಟ್ರೈಕ್' ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಕೈಗಾರಿಕೋದ್ಯಮ ಮೂಲಗಳ ಪ್ರಕಾರ, ಲಕ್ಕಿ ಸ್ಟ್ರೈಕ್ ಬ್ರ್ಯಾಂಡ್ ಸಿಗರೇಟು ಮೂಲತಃ ಅಮೆರಿಕನ್ ಬ್ರ್ಯಾಂಡ್,1871ರಲ್ಲಿ ಅಮೆರಿಕದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಇದೀಗ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ.
ಬ್ರ್ಯಾಂಡ್‌ನ್ನು ಆರಂಭದ ಹಂತದಲ್ಲಿ ದೆಹಲಿ, ಮುಂಬೈ ಮತ್ತು ಪುಣೆ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಗುವುದು.ಆಯ್ದ ಕೆಲ ರಿಟೇಲ್ ಔಟ್‌ಲೆಟ್‌ಗಳಲ್ಲಿ ಹೋಟೆಲ್, ರೆಸ್ಟುರೆಂಟ್ ಹಾಗೂ ಕ್ಲಬ್‌ಗಳಲ್ಲಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಲಕ್ಕಿ ಸ್ಟ್ರೈಕ್ ಬ್ರ್ಯಾಂಡ್‌ನ್ನು ಲಕ್ಕಿಸ್ ಎನ್ನುವ ಹೆಸರಿನಿಂದ ಜನಪ್ರಿಯವಾಗಿದೆ. ಮಾರ್ಲ್‌ಬೊರೊ, ಫಿಲಿಪ್ ಮೊರಿಸ್, ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಬ್ರ್ಯಾಂಡ್‌ಗಳ ವಿರುದ್ಧ ಸ್ಪರ್ಧೆ ನಡೆಸಲಿದೆ.
20 ಸಿಗರೇಟುಗಳಿರುವ ಲಕ್ಕಿ ಸ್ಟ್ರೈಕ್ ಸಿಗರೇಟ್ ಪ್ಯಾಕ್ 110 ರೂಪಾಯಿಗಳಿಗೆ ಲಭ್ಯವಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರ್ಲ್‌ಬೊರೊ 20 ಸಿಗರೇಟುಗಳ ಪ್ಯಾಕ್‌ಗೆ 98 ರೂಪಾಯಿಗಳ ದರ ನಿಗದಿಪಡಿಸಲಾಗಿದೆ.
ಐಟಿಸಿ ಸಂಸ್ಥೆ, ಇಂಡಿಯಾ ಕಿಂಗ್ಸ್, ಕ್ಲ್ಯಾಸಿಕ್, ಗೋಲ್ಟ್‌ಫ್ಲ್ಯಾಕ್, ಸಿಲ್ಕ್ ಕಟ್, ನೆವಿ ಕಟ್, ಸೀಜರ್ಸ್, ಕ್ಯಾಪ್‌ಸ್ಟಾನ್ ಬರ್ಕಲೆ, ಬ್ರಿಸ್ಟಾಲ್ ಮತ್ತು ಫ್ಲೇಕ್ ಬ್ರ್ಯಾಂಡ್‌ಗಳ ಸಿಗರೇಟ್‌ನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.