ಉದಕಮಂಡಲಂ(ತಮಿಳುನಾಡು): , ಸೋಮವಾರ, 21 ಜೂನ್ 2010( 13:02 IST )
3ಜಿ ತರಂಗಾಂತರ ಹಾಗೂ ಬಿಡಬ್ಲೂಎ ತರಂಗಾಂತರಗಳ ಯಶಸ್ವಿ ಹರಾಜಿನಿಂದ 1.06ಲಕ್ಷ ಕೋಟಿ ರೂಪಾಯಿಗಳ ಆದಾಯ ಸಂಗ್ರಹಿಸಿದ ಕೇಂದ್ರ ಸರಕಾರ, ಇದೀಗ 4ಜಿ ತರಂಗಾಂತರಗಳ ಹರಾಜಿನ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ಹೇಳಿದ್ದಾರೆ.
ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್, 4ಜಿ ತರಂಗಾಂತರಗಳ ಹರಾಜು ಕುರಿತಂತೆ ಟೆಲಿಕಾಂ ಕ್ಷೇತ್ರದಲ್ಲಿರುವ ಕಂಪೆನಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸುವಂತೆ ಕೆಲ ವಾರಗಳ ಹಿಂದೆ ಪ್ರಕಟಣೆಯನ್ನು ಬಿಡುಗಡೆಗೊಳಿಸಿದೆ ಎಂದು ತಿಳಿಸಿದ್ದಾರೆ.
ಅಗತ್ಯವಾದ ಫೀಡ್‌ಬ್ಯಾಂಕ್ ಮತ್ತು ಟ್ರಾಯ್ ಶಿಫಾರಸ್ಸುಗಳನ್ನು ಪಡೆದ ನಂತರ, 4ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆ ಮುಂದುವರಿಯಲಿದೆ. 4ಜಿ ತರಂಗಾಂತರಗಳನ್ನು ಅಲ್ಟ್ರಾ ಬ್ರಾಡ್‌ಬ್ಯಾಂಡ್ ಎಂದು ಕರೆಯಲಾಗುತ್ತಿದ್ದು, ವೇಗದ ಡೌನ್‌ಲೋಡ್ ಸ್ಪೀಡ್,ವಿಡಿಯೋ ಮತ್ತು ಇತರ ಸೇವೆಗಳನ್ನು ನೀಡಲಿದೆ.
ವಿಶ್ವ ಕ್ಯಾಸಿಕಲ್ ತಮಿಳು ಸಭೆ ಜೂನ್ 23ರಂದು ಕೊಯಿಮುತ್ತೂರ್‌ನಲ್ಲಿ ನಡೆಯಲಿದ್ದು, ಆಯೋಜಿಸಲಾಗುವ ಸ್ಥಳದಲ್ಲಿ, ಬಿಎಸ್‌ಎನ್‌ಎಲ್ 130 ಬಿಟಿಎಸ್ ಗೋಪುರಗಳು ಹಾಗೂ 20 ಮೊಬೈಲ್ ವ್ಯಾನ್‌ಗಳ ವ್ಯವಸ್ಥೆ ಮಾಡಿದೆ ಎಂದು ಸಚಿವ ರಾಜಾ ತಿಳಿಸಿದ್ದಾರೆ.
ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್‌ಟೆಲ್ ಮತ್ತು ಏರ್‌ಸೆಲ್ ಟೆಲಿಕಾಂ ಕಂಪೆನಿಗಳು ಕೂಡಾ ಟೆಲಿಕಾಂ ಟವರ್‌ಗಳನ್ನು ಸ್ಥಾಪಿಸಿವೆ ಎಂದು ಕೇಂದ್ರ ಸಚಿವ.ಎ.ರಾಜಾ ಹೇಳಿದ್ದಾರೆ.