ಸ್ಕೈ ಬಸ್ ತಂತ್ರಜ್ಞಾನಕ್ಕಾಗಿ ಕೊಂಕಣ್ ರೈಲ್ವೆ ಬಿಡ್ ಅಹ್ವಾನ
ನವದೆಹಲಿ, ಸೋಮವಾರ, 21 ಜೂನ್ 2010( 13:18 IST )
ಕೊಂಕಣ್ ರೈಲ್ವೆ ಇಲಾಖೆ, ಸ್ಕೈಬಸ್ ಮೆಟ್ರೋ ವ್ಯವಸ್ಥೆ ನಿರ್ಮಾಣದಲ್ಲಿ ಆಸಕ್ತಿಯಿರುವ ಜಾಗತಿಕ ಮಟ್ಟದ ಕಂಪೆನಿಗಳನ್ನು ಅಹ್ವಾನಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ವಾಣಿಜ್ಯ ಉಪಯೋಗಕ್ಕಾಗಿ ಸ್ಕೈಬಸ್ ತಂತ್ರಜ್ಞಾನವನ್ನು ಪಡೆಯಲು ನಿರ್ಧರಿಸಿ, ಜಾಗತಿಕ ಮಟ್ಟದ ಕಂಪೆನಿಗಳಿಗೆ ಅಹ್ವಾನ ನೀಡಲಾಗಿದೆ ಎಂದು ಕೊಂಕಣ್ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಮಟ್ಟದ ಟೆಂಡರ್ ಕರೆಯಲು ಅಗತ್ಯವಾದ ಕಾರ್ಯಗಳು ಮಕ್ತಾಯಗೊಂಡಿದ್ದು, ಶೀಘ್ರದಲ್ಲಿ ಸ್ಕೈ ಬಸ್ ತಂತ್ರಜ್ಞಾನಕ್ಕಾಗಿ ಟೆಂಡರ್ ಅಹ್ವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 2004ರ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಗೋವಾದ ಮಾರ್ಗೊವಾ ರೈಲ್ವೆ ನಿಲ್ದಾಣದಲ್ಲಿ ನಡೆಸಿದ ಪ್ರಯೋಗ ಪರೀಕ್ಷೆಯಲ್ಲಿ ಕೊಂಕಣ್ ರೈಲ್ವೆ ಕಾರ್ಪೋರೇಶನ್ ಸ್ಕೈ ಬಸ್ ಮೆಟ್ರೋ ಕೋಚ್‌ಗಳು ಟ್ರ್ಯಾಕ್‌ನ ಹತ್ತಿರದಲ್ಲಿರುವ ಕಂಬಕ್ಕೆ ಬಡಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದನು.
ತದ ನಂತರ ಕೊಂಕಣ್ ರೈಲ್ವೆ, ತಂತ್ರಜ್ಞಾನವನ್ನು ಯಶಸ್ವಿಯಾಗಿ ಆಧುನೀಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಪರಿಸರ ಸ್ನೇಹಿಯಾಗಿದೆ.ದೇಶದ ಬಹುತೇಕ ನಗರಗಳು ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸ್ಕೈ ಬಸ್ ವ್ಯವಸ್ಥೆಯನ್ನು ಅಳವಡಿಸಲು ಆಸಕ್ತಿ ವಹಿಸಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.