ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೆಹಲಿಯಲ್ಲಿ ಅಟೋ, ಟ್ಯಾಕ್ಸಿ ಬಾಡಿಗೆ ಹೆಚ್ಚಳ ಸಾಧ್ಯತೆ (Taxi unions | Auto | Taxi fares | Delhi | CNG)
Bookmark and Share Feedback Print
 
ದೆಹಲಿ ಸರಕಾರ ಸಿಎನ್‌ಜಿ ದರಗಳನ್ನು ಹೆಚ್ಚಿಸಲಿರುವ ಹಿನ್ನೆಲೆಯಲ್ಲಿ ಅಟೋ ಮತ್ತು ಟ್ಯಾಕ್ಸಿ ಬಾಡಿಗೆ ದರಗಳನ್ನು ಹೆಚ್ಚಿಸಲು ಅಟೋ ಮತ್ತು ಟ್ಯಾಕ್ಸಿ ಸಂಘಟನೆಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಬಾಡಿಗೆ ದರ ಏರಿಕೆ ಪ್ರಸ್ತಾವನೆಯನ್ನು ಸಾರಿಗೆ ಇಲಾಖೆ ಸಿದ್ಧಪಡಿಸಿದ್ದು, ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ.

ಅಟೋ ಮತ್ತು ಟ್ಯಾಕ್ಸಿ ಬಾಡಿಗೆ ದರ ಏರಿಕೆಗೆ ಸರಕಾರ ಸಮ್ಮತಿಸಲಿದೆ. ಆದರೆ ಸಂಘಟನೆಗಳು ಪ್ರಸ್ತಾವನೆಯಲ್ಲಿ ಸಲ್ಲಿಸಿದ ಬಾಡಿಗೆ ದರದಲ್ಲಿ ಏರುಪೇರಾಗಬಹುದಾಗಿದೆ.ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಅಟೋ ಬಾಡಿಗೆ ದರ ಆರಂಭಿಕ ಕಿಲೋಮೀಟರ್‌ಗೆ 10 ರೂಪಾಯಿಗಳನ್ನು ನಿಗದಿಪಡಿಸಿದ್ದು,ನಂತರ ಪ್ರತಿ ಕಿ.ಮಿ.4.50 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು.ಟ್ಯಾಕ್ಸಿ ಬಾಡಿಗೆ ದರದಲ್ಲಿ ಆರಂಭಿಕ ಕಿ.ಮಿ 15 ರೂಪಾಯಿ, ನಂತರ ಪ್ರತಿ ಕಿ.ಮಿ.ಗೆ .8.50 ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು.

ಅಟೋ ಮತ್ತು ಟ್ಯಾಕ್ಸಿ ಸಂಘಟನೆಗಳು, ಬಾಡಿಗೆ ದರವನ್ನು ದ್ವಿಗುಣಗೊಳಿಸುವಂತೆ ಸರಕಾರವನ್ನು ಒತ್ತಾಯಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ