ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸಸ್ ಟೆಲಿಕಾಂ ಕಂಪೆನಿಯನ್ನು ಖರೀದಿಸುವ ಮೂಲಕ ಟೆಲಿಕಾಂ ಕ್ಷೇತ್ರ ಪ್ರವೇಶಿಸಿದ ರಿಲಯನ್ಸ್ ಇಂಡಸ್ಟ್ರೀಸ್,ಆರಂಭಿಕವಾಗಿ ಟೆಲಿಕಾಂ ಕ್ಷೇತ್ರದ ಆಳವಾದ ಅಧ್ಯಯನ ನಡೆಸಬೇಕಿತ್ತು ಎಂದು ಇಂಟರ್‌ನ್ಯಾಷನಲ್ ರೇಟಿಂಗ್ ಏಜೆನ್ಸಿ ಮೂಡಿಸ್ ಅಭಿಪ್ರಾಯಪಟ್ಟಿದೆ.
ವಹಿವಾಟಿನಲ್ಲಿ ಹೆಚ್ಚಿತ್ತಿರುವ ರಿಸ್ಕ್‌ಗಳ ಮಧ್ಯೆಯು ರಿಲಯನ್ಸ್ ಇಂಡಸ್ಟ್ರೀಸ್ ರೇಟಿಂಗ್ ವಿಭಾಗದಲ್ಲಿ,ಉತ್ತಮ ಸ್ಥಾನಪಡೆದಿದೆ ಎಂದು ಮೂಡಿಸ್ ಅದ್ಯಯನ ಸಂಸ್ಥೆ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ 6 ಬಿಲಿಯನ್ ಡಾಲರ್ ಮೌಲ್ಯದ ಬ್ಯಾಲೆನ್ಸ್ ಶೀಟ್ ಹೊಂದಿದ್ದು, ವಾರ್ಷಿಕವಾಗಿ 7-8 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ.ಹೂಡಿಕೆಯಲ್ಲಿ ಹೆಚ್ಚಳದಿಂದಾಗಿ ಲಾಭದಲ್ಲಿ ಕೂಡಾ ಏರಿಕೆಯಾಗುವ ಸಾಧ್ಯತೆಗಳಿವೆ
ಕಳೆದ ತಿಂಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇನ್ಫೋಟೆಲ್ ಸಂಸ್ಥೆ ಶೇ.95ರಷ್ಟು ಶೇರುಗಳನ್ನು 4,800 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.