ಏಷ್ಯಾ ಖಂಡದಲ್ಲಿ ಜಪಾನ್, ಚೀನಾದ ನಂತರದ ಸ್ಥಾನಪಡೆದಿರುವ ಭಾರತ,ಆರ್ಥಿಕತೆಯಲ್ಲಿ ವೇಗವಾಗಿ ಸಾಗುತ್ತಿದ್ದು,ಮುಂಬರುವ 2013ರ ವೇಳೆಗೆ ಎರಡಂಕಿಯನ್ನು ತಲುಪುವ ಸಾಧ್ಯತೆಗಳಿವೆ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.
ಪ್ರಸಕ್ತ ವರ್ಷದ ಆರ್ಥಿಕ ಸಾಲಿನ ಅಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ ಶೇ.8.5ರಿಂದ ಶೇ.9.0ಕ್ಕೆ ತಲುಪುವ ವಿಶ್ವಾಸವಿದೆ.ಮುಂಬರುವ ಎರಡು ವರ್ಷಗಳಲ್ಲಿ ಜಿಡಿಪಿ ದರ ಎರಡಂಕಿಗೆ ತಲುಪಲಿದೆ ಎಂದು ವಹಿವಾಟು ಸಮ್ಮೇಳನದಲ್ಲಿ ತಿಳಿಸಿದ್ದಾರೆ
ಸತತ ನಾಲ್ಕು ವರ್ಷಗಳ ಅವಧಿಯಲ್ಲಿ ಶೇ.9ಕ್ಕೆ ತಲುಪಿದ್ದ ಜಿಡಿಪಿ ದರ 2008-09ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಶೇ.6.5ಕ್ಕೆ ಇಳಿಕೆ ಕಂಡಿತ್ತು.ಇತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೂಡಾ ಆರ್ಥಿಕತೆಯಲ್ಲಿ ಚೇತರಿಕೆಯತ್ತ ಸಾಗುತ್ತಿವೆ.
ರಫ್ತು ವಹಿವಾಟಿನ ಕುಸಿತದ ಮಧ್ಯೆಯು ಮೊಬೈಲ್ ಟೆಲಿಫೋನ್ ಕಾರುಗಳ ದೇಶಿಯ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವಲ್ಲಿ ಭಾರತ ಯಶಸ್ವಿಯಾಗಿದೆ.