ಫೋರ್ಬ್ಸ್ ಮ್ಯಾಗ್‌ಜಿನ್‌ನ ಬಿಲಿಯನೇರ್‌ಗಳ ಉತ್ತರಾಧಿಕಾರಿ ಪಟ್ಟಿಯಲ್ಲಿ ಭಾರತೀಯ ಮಹಿಳೆಯರಾದ ರೋಶ್ನಿ ನಡಾರ್ ಮತ್ತು ನಿಶಾ ಗೋದ್ರೇಜ್ ಸ್ಥಾನಪಡೆದಿದ್ದಾರೆ.
ಅಮೆರಿಕದ ಬಿಜಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ ವಾರ್ಷಿಕ ಬಿಲಿಯನೇರ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ, ಭಾರತೀಯ ಮಹಿಳೆಯರ ಸರಳ ಜೀವನ ಹಾಗೂ ಕಾರ್ಯವೈಖರಿಯಿಂದಾಗಿ ಶೀಘ್ರದಲ್ಲಿ ಬಿಲಿಯನೇರ್‌ಗಳ ಸಾಲಿನಲ್ಲಿ ಸ್ಥಾನಪಡೆಯಲಿದ್ದಾರೆ ಎಂದು ವರದಿ ಮಾಡಿದೆ.
ಭಾರತದ ಖ್ಯಾತ ಉದ್ಯಮಿ ಶಿವ್ ನಡಾರ್ ಅವರ ಪುತ್ರಿಯಾದ ರೋಶ್ನಿ ನಡಾರ್ ಈಗಾಗಲೇ ಬಿಲಿಯನೇರ್ ಪಟ್ಟಿಯಲ್ಲಿ ಸ್ಥಾನಪಡೆಯ ಅವಕಾಶ ಶೀಘ್ರದಲ್ಲಿ ಬರಲಿದೆ ಎಂದು ಫೋರ್ಬ್ಸ್ ಮೂಲಗಳು ತಿಳಿಸಿವೆ.
28 ವರ್ಷ ವಯಸ್ಸಿನ ರೋಶ್ನಿ ನಡಾರ್, ಕೆಲ್ಲಾಂಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರೆಯಾಗಿದ್ದು, ವಾರ್ಷಿಕವಾಗಿ 5 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಎಚ್‌ಸಿಎಲ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.ಏತನ್ಮಧ್ಯೆ ಶಿವ್ ನಡಾರ್ ಕಂಪೆನಿಯ ಮುಖ್ಯಸ್ಥ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಮತ್ತೊಬ್ಬ ಭಾರತೀಯ ಮಹಿಳೆ ಆದಿ ಗೋದ್ರೇಜ್ ಪುತ್ರಿಯಾದ 31 ವರ್ಷ ವಯಸ್ಸಿನ ನಿಸಾ ಗೋದ್ರೇಜ್,5.2 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.
ನಿಸಾ ಗೋದ್ರೇಜ್, ವಾರ್ಟೊನ್ ವಿಶ್ವವಿದ್ಯಾಲಯದಲ್ಲಿ ಪದವೀಧರೆಯಾಗಿದ್ದು,ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪೂರ್ತಿಗೊಳಿಸಿದ್ದಾರೆ.ಕಳೆದ 10 ವರ್ಷಗಳಿಂದ ವ್ಯವಸ್ಥಾಪನಾ ತರಬೇತಿಯನ್ನು ಪಡೆಯುತ್ತಿದ್ದರು.
ನಿಸಾ ಗೋದ್ರೇಜ್ ಅವರನ್ನು ಹ್ಯೂಮನ್ ಕ್ಯಾಪಿಟಲ್ ಆಂಡ್ ಇನ್ನೋವೇಶನ್ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಿಸಾ ಆಧೀನದಲ್ಲಿ 20,000 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.