ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಹಾಗೂ ಸರಕಾರದಿಂದ ದರ ನಿಯಂತ್ರಣ ಮುಕ್ತಗೊಳಿಸುವ ಕುರಿತಂತೆ, ಜೂನ್ 25 ರಂದು ಸಭೆ ಸೇರಲಿರುವ ಅಧಿಕಾರಯುತ ಸಚಿವ ಸಂಪುಟ ಸಮಿತಿ ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಒಂದು ವೇಳೆ ಅಂತಾರಾಷ್ಟ್ರೀಯ ದರಗಳು ದೇಶಿಯ ದರಗಳಿಗೆ ಪೂರಕವಾದಲ್ಲಿ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 3.73 ರೂಪಾಯಿಗಳಷ್ಟು ಏರಿಕೆಯಾಗಲಿದೆ.
ಪೆಟ್ರೋಲ್ ದರ ಪ್ರಸ್ತುತ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 47.93 ರೂಪಾಯಿಗಳಿಗೆ ತಲುಪಿದೆ.
ಮುಂಬರುವ ಶಉಕ್ರವಾರದಂದು ಅಧಿಕಾರಯುತ ಸಚಿವ ಸಂಪುಟ ಸಮಿತಿಯ ಸಭೆ ನಡೆಯಲಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಳ ಆಧಾರವಾಗಿಟ್ಟುಕೊಂಡು, ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಪ್ರತಿ ಬ್ಯಾರೆಲ್‌ಗೆ 77 ಡಾಲರ್‌ಗೆ ಏರಿಕೆ ಕಂಡಿದೆ.