ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್‌ಇಂಡಿಯಾ: ದೆಹಲಿಯಿಂದ ಮೆಲ್ಬೊರ್ನ್‌ಗೆ ನೇರ ವಿಮಾನ (Air India | Melbourne | Delhi | International flights | Arvind Jadhav)
ಸರಕಾರಿ ಸ್ವಾಮ್ಯದ ಪ್ರತಿಷ್ಠಿತ ಏರ್‌ಇಂಡಿಯಾ ವಿಮಾನಯಾನ ಸಂಸ್ಥೆ, ನವೆಂಬರ್ 1ರಿಂದ ದೆಹಲಿಯಿಂದ ಮೆಲ್ಬೊರ್ನ್‌ಗೆ ನೇರ ವಿಮಾನ ಸಂಚಾರ ಹಾರಾಟ ಆರಂಭಿಸಲಾಗುವುದು ಎಂದು ಘೋಷಿಸಿದೆ.
ವಿಕ್ಟೊರಿಯನ್ ಪ್ರೀಮಿಯರ್ ಸಂಸ್ಥೆಯೊಂದಿಗೆ ಏರ್‌ಇಂಡಿಯಾ ಮುಖ್ಯಸ್ಥ ಅರವಿಂದ್ ಜಾಧವ್ ಒಪ್ಪಂದಕ್ಕೆ ಹಸ್ತಾಕ್ಷರ ಹಾಕಿದ ನಂತರ ನೂತನ ಸೇವೆಯನ್ನು ಘೋಷಿಸಲಾಗುವುದು ಎಂದು ಏರಿಂಡಿಯಾ ಮೂಲಗಳು ತಿಳಿಸಿವೆ.
ಭಾರತದ ಬಹುತೇಕ ಪ್ರವಾಸಿಗರು ಹಾಗೂ ಉದ್ಯಮಿಗಳು ನೇರವಾಗಿ ಆಸ್ಟ್ರೇಲಿಯಾದ ಮೆಲ್ಬೊರ್ನ್‌ಗೆ ತೆರಳುವುದರಿಂದ, ಪ್ರವಾಸಿಗರ ಹಾಗೂ ಉದ್ಯಮಿಗಳ ಅನುಕೂಲಕ್ಕಾಗಿ ಪ್ರಥಮ ಬಾರಿಗೆ ನೇರ ವಿಮಾನ ಸಂಚಾರ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರಿಂಡಿಯಾ ವಿಮಾನಯಾನ ಸಂಸ್ಥೆ ಮೆಲ್ಬೊರ್ನ್‌ನಲ್ಲಿ ಪ್ರಾದೇಶಿಕ ಕೇಂದ್ರ ಕಚೇರಿಗಳನ್ನು ತೆರೆಯಲು ನಿರ್ಧರಿಸಿದ್ದು, 78 ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ವಾರ್ಷಿಕವಾಗಿ 123,000 ನೂತನ ಪ್ರವಾಸಿಗರು ದೆಹಲಿಯಿಂದ ಮೆಲ್ಬೊರ್ನ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆ ವೃದ್ಧಿಯಾಗುತ್ತಿರುವುದರಿಂದ, ಭಾರತೀಯರು, ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ತಮ್ಮ ಬಂಧುಗಳನ್ನು ಹಾಗೂ ಗೆಳೆಯರನ್ನು ಭೇಟಿ ಮಾಡಲು ತೆರಳುತ್ತಿರುವುದು ಕಂಡುಬಂದಿದೆ.ಪ್ರವಾಸೋದ್ಯಮದದಿಂದಾಗಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಏರಿಂಡಿಯಾ ಮುಖ್ಯಸ್ಥ ಅರವಿಂದ್ ಜಾಧವ್ ತಿಳಿಸಿದ್ದಾರೆ.