ಸತತ ನಾಲ್ಕು ದಿನಗಳ ವಹಿವಾಟಿನಲ್ಲಿ ಏರಿಕೆ ಕಂಡಿದ್ದ ಚಿನ್ನದ ದರ, ಚಿನ್ನದ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಚಿನ್ನದ ದರ ಪ್ರತಿ 10ಗ್ರಾಂಗೆ 295 ರೂಪಾಯಿಗಳ ಇಳಿಕೆ ಕಂಡು 18,850 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆ ಕುಸಿತವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 550 ರೂಪಾಯಿಗಳ ಇಳಿಕೆಯಾಗಿ 29,600 ರೂಪಾಯಿಗಳಿಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಕುಸಿತವಾಗಿದ್ದರಿಂದ,ದೇಶಿಯ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಕೂಡಾ ಕುಸಿತವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಮದುವೆ ಸೀಜನ್ ಬೇಡಿಕೆ ಹಾಗೂ ಪ್ರಬಲ ಆರ್ಥಿಕ ವಹಿವಾಟಿನಿದಾಗಿ ಸತತ ನಾಲ್ಕು ದಿನಗಳ ಏರಿಕೆ ಕಂಡ ಚಿನ್ನದ ದರ, ನಿನ್ನೆಯ ವಹಿವಾಟಿನಲ್ಲಿ ಪ್ರತಿ 10ಗ್ರಾಂಗಳಿಗೆ ದಾಖಲೆಯ 19,145 ರೂಪಾಯಿಗಳಿಗೆ ತಲುಪಿತ್ತು.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರದಲ್ಲಿ ಪ್ರತಿ ಔನ್ಸ್‌ಗೆ 23.90 ಡಾಲರ್‌ಗಳ ಇಳಿಕೆಯಾಗಿ 1,232.60 ಡಾಲರ್‌ಗಳಿಗೆ ತಲುಪಿದೆ.
ದುರ್ಬಲ ವಹಿವಾಟಿನಿಂದಾಗಿ ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ, ಬೆಳ್ಳಿಯ ದರದಲ್ಲಿ 550 ರೂಪಾಯಿಗಳಿಗೆ ಇಳಿಕೆಯಾಗಿ, 29,600 ರೂಪಾಯಿಗಳಿಗೆ ತಲುಪಿದೆ.