ಹಣದುಬ್ಬರ ದರ ಪ್ರಸ್ತುತ ಶೇ.10ರಷ್ಟಿದ್ದು, ಮುಂಬರುವ ಮಾರ್ಚ್ ವೇಳೆಗೆ ಶೇ.5ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿ ಆರಂಭವಾದ ಇಂಡೋ-ಯುಎಸ್ ಸಿಇಒ ಶೃಂಗಸಭೆಯಲ್ಲಿ ಮಾತನಾಡಿದ ಮುಖರ್ಜಿ,ಹಣದುಬ್ಬರ ದರ ಜುಲೈ ಮಧ್ಯಭಾಗದಿಂದ ಹಣದುಬ್ಬರ ಇಳಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಅಹಾರ ವಸ್ತುಗಳು ಹಾಗೂ ಇಂಧನ ದರಗಳ ಏರಿಕೆಯಿಂದಾಗಿ, ಮೇ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.10.16ಕ್ಕೆ ಏರಿಕೆಯಾಗಿದೆ. ಹೆಚ್ಚುತ್ತಿರುವ ಹಣದುಬ್ಬರ ದರ ಅಹಾರೇತರ ವಸ್ತುಗಳಿಗೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಚಿವ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ಮುಂಗಾರು ಮಳೆ ವಿಫಲಗೊಂಡಿದ್ದರಿಂದ,ಅಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಕೆಯಾಗಿದ್ದರಿಂದ. ಹಣದುಬ್ಬರ ದರ ಏರಿಕೆಗೆ ಮೂಲಕಾರಣವಾಗಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.