ದೇಶದ ಖ್ಯಾತ ಉದ್ಯಮಿಯಾದ ಅನಿಲ್ ಅಂಬಾನಿ, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಅವರನ್ನು ಭೇಟಿ ಮಾಡಿ ವಿದ್ಯುತ್ ಉತ್ಪಾದನೆ ಘಟಕಗಳಿಗೆ ನೈಸರ್ಗಿಕ ಅನಿಲ ಸರಬರಾಜು ಕುರಿತಂತೆ ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ.
ನನಗೆ ಹಲವು ವರ್ಷಗಳಿಂದ ಅನಿಲ್ ಅಂಬಾನಿಯವರ ಪರಿಚಯವಿದೆ. ಆದ್ದರಿಂದ ಭೇಟಿ ಮಾಡಲು ಬಂದಿದ್ದರು. ಇದಕ್ಕಿಂತ ಹೆಚ್ಚಿಗೆ ಹೇಳಲು ಬಯಸುವುದಿಲ್ಲ ಎಂದು ಸಚಿವ ದೇವ್ರಾ ತಿಳಿಸಿದ್ದಾರೆ.
ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಹಾಗೂ ಕಾರ್ಯದರ್ಶಿ ಎಸ್.ಸುಂದರೇಶನ್ ಉಪಸ್ಥಿತರಿದ್ದ ಸಭೆಯ ಕುರಿತಂತೆ ಅನಿಲ್ ಅಂಬಾವಿ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಅನಿಲ್ ಅಂಬಾನಿ ಗ್ರೂಪ್ ಉತ್ತರ ಪ್ರದೇಶದ ದಾದ್ರಿ ಪ್ರೊಜೆಕ್ಟ್‌ನಲ್ಲಿ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುತ್ತಿದ್ದು, ವಿದ್ಯುತ್ ಸ್ಥಾವರಗಳಿಗೆ ಸರಕಾರದಿಂದ ನೈಸರ್ಗಿಕ ಅನಿಲ ಅನುದಾನ ಹಂಚಿಕೆಯಾಗಲಿರುವುದರಿಂದ ಮಾತುಕತೆ ನಡೆಸಿರಬಹುದು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಅಂಬಾವಿ ಸಹೋದರರು ಪರಸ್ಪರರ ಕ್ಷೇತ್ರಗಳಲ್ಲಿ ಸಹಕಾರ ನೀಡುವುದನ್ನು ಮುಂದುವರಿಸಲಾಗುವುದು ಎಂದು ಕಳೆದ ವಾರ ಹೇಳಿಕೆ ನೀಡಿದ್ದಾರೆ.ಅನಿಲ್ ಅಂಬಾನಿ ಸಂಸ್ಥೆಯ ವಿದ್ಯುತ್ ಸ್ಥಾವರಗಳಿಗೆ ಕೆಜಿ ಬೇಸಿನ್‌ನಿಂದ ನೈಸರ್ಗಿಕ ಅನಿಲವನ್ನು ಪೂರೈಸಲಾಗುವುದು ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.