ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದೊಂದಿಗೆ ಆರ್ಥಿಕ ಬಾಂಧವ್ಯ ವೃದ್ಧಿ:ಕ್ಲಿಂಟನ್ (Pranab Mukherjee | Hillary Clinton | Indo-US business forum | Ratan Tata)
ಇಂಡೋ-ಯುಎಸ್ ಬಿಜಿನೆಸ್ ಫೋರಂ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ , ಭಾರತದೊಂದಿಗೆ ಆರ್ಥಿಕ ಬಾಂಧವ್ಯದಲ್ಲಿ ವೃದ್ಧಿಯಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತದ ವಿತ್ತಸಚಿವ ಪ್ರಣಬ್ ಮುಖರ್ಜಿ, ಕ್ಲಿಂಟನ್ ಅವರೊಂದಿಗೆ ಆರ್ಥಿಕ ಒಪ್ಪಂದಗಳು, ಹವಾಮಾನ ತಾಪಮಾನ ಸೇರಿದಂತೆ ದ್ವಿಪಕ್ಷೀಯ ಭಾಂಧವ್ಯಗಳ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ದೇಶದ ಖ್ಯಾತ ಉದ್ಯಮಿ ನ್ಯಾನೋ ರೂವಾರಿ ಟಾಟಾ ಗ್ರೂಪ್‌ನ ಮುಖ್ಯಸ್ಥ ರತನ್ ಟಾಟಾ ಹಾಗೂ ಹನಿವೆಲ್ ಕಂಪೆನಿಯ ಮುಖ್ಯಸ್ಥ ಡೇವಿಡ್ ಕೊಟೆ ಉಪಸ್ಥಿತರಿದ್ದರು ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶೃಂಗಸಭೆಯ ವರದಿಗಳನ್ನು ಪ್ರಧಾನ ಮಂತ್ರಿ ಮತ್ತು ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಅಮೆರಿಕದ ಮಧ್ಯೆ ಆರ್ಥಿಕ ಒಪ್ಪಂದಗಳು ಸೇರಿದಂತೆ ವಹಿವಾಟು ಕ್ಷೇತ್ರದಲ್ಲಿ ವೃದ್ಧಿಯಾಗಲಿದೆ ಎನ್ನುವುದಕ್ಕೆ ಹಲವು ಕಾರಣಗಳಿವೆ. ಭಾರತದ ಆರ್ಥಿಕ ವೃದ್ಧಿ ದರ ಮುಂಬರುವ ಐದು ವರ್ಷಗಳಲ್ಲಿ ಎರಡಂಕಿಗೆ ತಲುಪುವ ವಿಶ್ವಾಸವಿದೆ ಎಂದು ಮುಖರ್ಜಿ ಹೇಳಿದ್ದಾರೆ.