ಮುಂಬರುವ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಎರಡಂಕಿಯ ಗಡಿಯನ್ನು ತಲುಪುವ ವಿಶ್ವಾಸವಿದೆ ಎಂದು ಇಂಡೋ-ಯುಎಸ್ ಫೋರಂ ಸಭೆಯಲ್ಲಿ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ದೇಶದ ಆರ್ಥಿಕ ವೃದ್ಧಿ ದರ ಎರಡಂಕಿಗೆ ತಲುಪಲಿದೆ ಎನ್ನುವ ಆಶಾವಾದಕ್ಕೆ ಹಲವಾರು ಕಾರಣಗಳಿವೆ. ಆದರೆ, ಮುಂಬರುವ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಎರಡಂಕಿಯ ಚೇತರಿಕೆಯನ್ನು ಕಾಣಲಿದೆ.
ದೇಶದ ಆರ್ಥಿಕತೆಯ ವಿವರಣೆ ನೀಡಿದ ಮುಖರ್ಜಿ, ಆರ್ಥಿಕ ನೀತಿ ಹಾಗೂ ಕೈಗಾರಿಕೋದ್ಯಮ ಚೇತರಿಕೆಯಿಂದಾಗಿ, ಕಠಿಣ ಪರಿಸ್ಥಿತಿಯಲ್ಲಿ ಕೂಡಾ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ತ್ರೈಮಾಸಿಕ ಅವಧಿಯ ಆರ್ಥಿಕತೆಯಲ್ಲಿ ಶೇ8.6ರಷ್ಟು ಏರಿಕೆಯಾಗಿದ್ದು, 2009-10ರ ಅವಧಿಯಲ್ಲಿ ಜಿಡಿಪಿ ದರ ಶೇ.7.4ರಷ್ಟಿತ್ತು ಎಂದು ತಿಳಿಸಿದ್ದಾರೆ.