ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್ ದರದಲ್ಲಿ 3-4 ರೂಪಾಯಿ ಏರಿಕೆ ಸಾಧ್ಯತೆ (EGoM | Fuel prices | Deregulation | Petrol prices)
Bookmark and Share Feedback Print
 
ಸರಕಾರದಿಂದ ದರ ಏರಿಕೆ ನಿಯಂತ್ರಣವನ್ನು ಹಿಂಪಡೆಯಲು ಅಧಿಕಾರಯುತ ಸಚಿವರ ಸಂಪುಟ ಸಮಿತಿ(ಇಜಿಒಎಂ) ಸಭೆ ಸೇರಲಿದ್ದು, ಸಭೆಯಲ್ಲಿ ಪೆಟ್ರೋಲ್ ದರದಲ್ಲಿ 3-4 ರೂಪಾಯಿಗಳಷ್ಟು ಏರಿಕೆ ಮಾಡುವ ಸಾಧ್ಯತೆಗಳಿವೆ. ಆದರೆ ಸರಕಾರದಿಂದ ದರ ಏರಿಕೆ ನಿಯಂತ್ರಣ ಹಿಂಪಡೆಯುವ ನೀತಿಯಲ್ಲಿ ಬದಲಾವಣೆಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಡೀಸೆಲ್ ಸೀಮೆ ಎಣ್ಣೆ ಮತ್ತು ಅಡುಗೆ ಅನಿಲ ದರದಲ್ಲಿ ಹೆಚ್ಚಳಗೊಳಿಸುವ ಉದ್ದೇಶವಿಲ್ಲ. ಡೀಸೆಲ್ ದರವನ್ನು ಹೆಚ್ಚಿಸಿದಲ್ಲಿ ಹಣದುಬ್ಬರ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಸೀಮೆ ಎಣ್ಣೆ ಮತ್ತು ಅಡುಗೆ ಅನಿಲ ದರವನ್ನು ಹೆಚ್ಚಿಸಲು ಮೈತ್ರಿ ಪಕ್ಷಗಳ ಹಾಗೂ ವಿರೋಧ ಪಕ್ಷಗಳ ವಿರೋಧವಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 72ಡಾಲರ್‌ಗಳಾಗಿದ್ದು, ತೈಲ ಕಂಪೆನಿಗಳು ಪ್ರತಿ ಲೀಟರ್‌ಗೆ 3.35 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ. ಡೀಸೆಲ್ ಮಾರಾಟದಿಂದ ಪ್ರತಿ ಲೀಟರ್‌ಗೆ 3.49 ಸೀಮೆ ಎಣ್ಣೆ 18.82, ಅಡುಗೆ ಅನಿಲ ಪ್ರತಿ ಸಿಲೆಂಡರ್‌ಗೆ 262 ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ.

ಪ್ರಣಬ್ ಮುಖರ್ಜಿ ನೇತೃತ್ವದ ಅಧಿಕಾರಯುತ ಸಚಿವರ ಸಮಿತಿ, ಜೂನ್ 7ರಂದು ನಡೆದ ಸಭೆಯಲ್ಲಿ ರೈಲ್ವೆ ಸಚಿವ ಮಮತಾ ಬ್ಯಾನರ್ಜಿ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರ ಅನುಪಸ್ಥಿತಿಯಿಂದಾಗಿ, ದರ ಏರಿಕೆ ಕುರಿತಂತೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ