ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಸ್ಪೆಕ್ಟ್ರಂ ಬಿಡ್ ಪಡೆದಿರುವ ಸರಕಾರಿ ಸ್ವಾಮ್ಯದ ಎಂಟಿಎನ್‌ಎಲ್ ಸಂಸ್ಥೆ, ಸರಕಾರಕ್ಕೆ 4,534 ಕೋಟಿ ರೂಪಾಯಿ ಶುಲ್ಕ ಪಾವತಿಗಾಗಿ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಎಂಟಿಎನ್‌ಎಲ್ ನಿರ್ದೇಶಕಿಃ(ಆರ್ಥಿಕ) ಅನಿತಾ ಸೋನಿಯವರನ್ನು ಸಂಪರ್ಕಿಸಿದಾಗ, ಮೂರು ಬ್ಯಾಂಕ್‌ಗಳಿಂದ ಸಾಲಪಡೆದಿರುವುದನ್ನು ಖಚಿತಪಡಿಸಿದ್ದಾರೆ.
ಆದರೆ ಮೂರು ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಪರವಾನಿಗಿ ಶುಲ್ಕ ಪಾವತಿಗೆ ಅಗತ್ಯವಾಗಿರುವ ಹಣದ ಸಾಲ ಪಡೆಯಲಾಗಿದೆ ಎಂದು ತಿಳಿಸಿವೆ.
ಎಂಟಿಎನ್‌ಎಲ್ ಟೆಲಿಕಾಂ ಸಂಸ್ಥೆ, ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡಿದೆ.ಕಳೆದ ಜೂನ್ ತಿಂಗಳ ಅವಧಿಯಲ್ಲಿ 3ಜಿ ತರಂಗಾಂತರಗಳ ಪರವಾನಿಗಿ ಶುಲ್ಕ ಪಾವತಿಗಾಗಿ 6,564 ಕೋಟಿ ರೂಪಾಯಿಗಳಲ್ಲಿ ಎಕ್ಸಿಸ್ ಬ್ಯಾಂಕ್‌ನಿಂದ 2,500 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿತ್ತು.
ಎಂಟಿಎನ್‌ಎಲ್ ಸಂಸ್ಥೆ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಗೆ ಸರಕಾರ ಒಂದು ವರ್ಷದ ಹಿಂದೆ 3ಜಿ ಮತ್ತು ಬಿಡಬ್ಲೂಎ ತರಂಗಾಂತರಗಳನ್ನು ನೀಡಿತ್ತು.