ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ಕಂಪೆನಿಯ ಶೇ.10ರಷ್ಟು ಶೇರುಗಳನ್ನು ಮಾತ್ರ ಮಾಡಲು ನಿರ್ಧರಿಸಿದ್ದು, ಶೇ.25ರಷ್ಟು ಹೂಡಿಕೆ ಹಿಂತೆಗೆತಕ್ಕೆ ಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹಿರಂಗವಾದ ಮಾಹಿತಿ ತಪ್ಪು ತಿಳುವಳಿಕೆಯಿಂದ ಕೂಡಿದೆ.ನಾನು ವಾಸ್ತವ ಸಂಗತಿಯನ್ನು ತಿಳಿಸಲು ಬಯಸುತ್ತೇನೆ.ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಶೇ.10ಕ್ಕಿಂತ ಹೂಡಿಕೆ ಹಿಂತೆಗೆತದಲ್ಲಿ ಹೆಚ್ಚಳವಾಗುವುದಿಲ್ಲ. ಒಂದು ವೇಳೆ ಸರಕಾರ ಶೇ.25ರಷ್ಟು ಹೂಡಿಕೆ ಹಿಂತೆಗೆತಕ್ಕೆ ನಿರ್ಧರಿಸಿದರೂ ಕೂಡಾ ಕೋಲ್ ಇಂಡಿಯಾಗೆ ಅನ್ವಯವಾಗುವುದಿಲ್ಲ ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೋಲ್ ಇಂಡಿಯಾ ಸಂಸ್ಥೆಯಲ್ಲಿ ಸರಕಾರ ಶೇ100ರಷ್ಟು ಶೇರುಗಳನ್ನು ಹೊಂದಿದ್ದು, ಶೇ.10ರಷ್ಟು ಹೂಡಿಕೆ ಹಿಂತೆಗೆತ ಕುರಿತಂತೆ ಕಳೆದ ವಾರ ಸಚಿವ ಸಂಪುಟ ಸಭೆ ನಿರ್ಧರಿಸಿತ್ತು.
ಪ್ರಸಕ್ತ ತಿಂಗಳ ಅವಧಿಯಲ್ಲಿ, ಸರಕಾರ ಶೇರುಪೇಟೆ ನೋದಾಯಿತ ಕಂಪೆನಿಗಳು, ಸಾರ್ವಜನಿಕ ಶೇರುಪಾಲನ್ನು ಶೇ.25ರಷ್ಟು ಹೆಚ್ಚಿಸುವಂತೆ ಆದೇಶಿಸಿತ್ತು.ನಂತರ ಕೆಲ ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಹೇಳಿಕೆ ನೀಡಿತ್ತು.