ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಏರಿಕೆ (Merrill Lynch Global Wealth Management and Capgemini | India | China | millionaires)
Bookmark and Share Feedback Print
 
ವಿಶ್ವದಲ್ಲೇ ಶೀಘ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಪ್ರಬಲ ಆರ್ಥಿಕ ಶಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲೂ ಭಾರೀ ಹೆಚ್ಚಳ ಕಂಡಿದೆಯೆಂದು ಸಮೀಕ್ಷೆಯೊಂದರ ವರದಿ ಬಹಿರಂಗಪಡಿಸಿದೆ.

2009ರ ಸಾಲಿನಲ್ಲಿ ಭಾರತದ ಕೋಟ್ಯಧಿಪತಿಗಳ ಸಂಖ್ಯೆಯು ಶೇಕಡಾ 50ರಷ್ಟು ಹೆಚ್ಚಳಗೊಂಡಿದೆ ಎಂದು ಮಿರಿಲ್ ಲ್ಯಾಂಚ್ ವೆಲ್ತ್ ಮ್ಯಾನೆಜ್‌ಮೆಂಟ್ ಆಂಡ್ ಕ್ಯಾಂಪ್ಮನಿ ತಿಳಿಸಿದೆ.

ಅಲ್ಲದೆ ಈ ಅವಧಿಯಲ್ಲಿ ಏಷ್ಯಾದಲ್ಲಿ ಅತೀ ಹೆಚ್ಚು ಕೋಟ್ಯಧಿಪತಿಗಳನ್ನು ಭಾರತ ಸೃಷ್ಟಿಸಿದೆ. ಭಾರತದಲ್ಲಿ ಒಟ್ಟು 1,26,700 ಮಂದಿ ಕೋಟ್ಯಧಿಪತಿಗಳಿದ್ದಾರೆ. ಆದರೂ ವಿಶ್ವಕ್ಕೆ ಹೋಲಿಸಿದಾಗ 15ನೇ ಸ್ಥಾನದಲ್ಲಿದೆ.

ಭಾರತದ ಕೋಟ್ಯಧಿಪತಿಗಳ ಸಂಖ್ಯೆಯು 2008ಕ್ಕೆ ಹೋಲಿಸಿದಾಗ ಏಷಿಯಾ-ಫೆಸಿಫಿಕ್ ಪ್ರದೇಶದಲ್ಲಿ ಎರಡನೇ ಅತೀ ವೇಗದಲ್ಲಿ ಬೆಳೆದು ಬರುತ್ತಿದೆ ಎಂದು ವರದಿ ಹೇಳಿವೆ.

ಅದೇ ರೀತಿ ಯುರೋಪ್‌ಗೆ ಹೋಲಿಕೆ ಮಾಡಿದಾಗ ಏಷ್ಯಾದಲ್ಲಿನ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡಿದೆ. ಈ ಪ್ರದೇಶದಲ್ಲಿ 3 ಮಿಲಿಯನ್‌ಗಳಷ್ಟು ಏರಿಕೆ ಕಂಡಿದೆ.

ಭವಿಷ್ಯದ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ ಮತ್ತು ಚೀನಾ ಆಳ್ವಿಕೆ ನಡೆಸಲಿದೆ ಎಂದು ಸಮೀಕ್ಷೆ ಹೇಳಿವೆ. ಚೀನಾದ ಕೋಟ್ಯಧಿಪತಿಗಳ ಸಂಖ್ಯೆಯು ಶೇಕಡಾ 31ರಷ್ಟು ಏರಿಕೆ ಕಂಡಿದ್ದು, 4,77,000ಕ್ಕೆ ತಲುಪಿದೆ. ಹಾಂಕಾಂಗ್ ಕೋಟ್ಯಧಿಪತಿಗಳ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಕೋಟ್ಯಧಿಪತಿ, ಟೀನಾ, ಲಂಡನ್