ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮದ್ಯ, ಸಿಗರೇಟು ಸೇವನೆ: ಕಂಪೆನಿಗಳಿಗೆ 800 ಕೋಟಿ ನಷ್ಟ (Smoking | Drinking | Employees | Assocham | Companies | Annual loss)
Bookmark and Share Feedback Print
 
PTI
ಉದ್ಯೋಗಿಗಳ ಸಿಗರೇಟು ಹಾಗೂ ಮದ್ಯಸೇವನೆ ವ್ಯಸನ ಹೆಚ್ಚಳದಿಂದಾಗಿ, ಕಂಪೆನಿಗಳು ವಾರ್ಷಿಕವಾಗಿ 700 -800 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿವೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

"ಸ್ವ ನಾಶ" ಹವ್ಯಾಸಗಳಾದ ಸಿಗರೇಟು, ಮದ್ಯಸೇವನೆ ಮತ್ತು ಸಿದ್ಧ ಅಹಾರ ಸೇವನೆಯಿಂದಾಗಿ ಕಾರ್ಪೋರೇಟ್ ಕಂಪೆನಿಗಳ ಶೇ.29ರಷ್ಟು ಉದ್ಯೋಗಿಗಳು ಹೊಟ್ಟೆನೋವಿನ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಅನಾರೋಗ್ಯದಿಂದಾಗಿ ಕಾರ್ಪೋರೇಟ್ ಕಂಪೆನಿಗಳ ಶೇ.20ರಷ್ಟು ಉದ್ಯೋಗಿಗಳು ಕೆಲಸಕ್ಕೆ ಗೈರುಹಾಜರಾಗುತ್ತಿದ್ದಾರೆ. ಇದರಿಂದಾಗಿ ಕಂಪೆನಿಗಳ ಉತ್ಪನ್ನಗಳಲ್ಲಿ ಕೊರತೆಯಾಗಿ, ವಾರ್ಷಿಕವಾಗಿ 700-800 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ ಎಂದು ಅಸೋಚಾಮ್ ಪ್ರದಾನ ಕಾರ್ಯದರ್ಶಿ ಡಿ.ಎಸ್ ರಾವತ್ ತಿಳಿಸಿದ್ದಾರೆ.

ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಕಾರ್ಪೋರೇಟ್ ಕಂಪೆನಿಗಳ ಸುಮಾರು 216 ಉದ್ಯೋಗಿಗಳನ್ನು ಸಂಪರ್ಕಿಸಿ, ವರದಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕಂಪೆನಿಗಳ ಕಾರ್ಯನಿರ್ವಹಣೆ ಒತ್ತಡದಿಂದಾಗಿ, ಮಲಗುವ ಹಾಗೂ ಕೆಲಸದ ಅವಧಿಯ ವೇಳಾಪಟ್ಟಿಯ ಬದಲಾವಣೆಯಿಂದಾಗಿ,ಉದ್ಯೋಗಿಗಳು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.ಪರೋಕ್ಷವಾಗಿ ಕಂಪೆನಿಯ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಸೋಚಾಮ್ ಪ್ರದಾನ ಕಾರ್ಯದರ್ಶಿ ಡಿ.ಎಸ್ ರಾವತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ