ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ, ಚಿನ್ನದ ಸಂಗ್ರಹಕಾರರು ಹಾಗೂ ಆಭರಣಗಳ ತಯಾರಕರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದು, ಪ್ರತಿ10 ಗ್ರಾಂಗೆ 120 ರೂಪಾಯಿಗಳ ಏರಿಕೆಯಾಗಿ 18,970 ರೂಪಾಯಿಗಳಿಗೆ ತಲುಪಿದೆ.
ನಾಣ್ಯಗಳ ತಯಾರಕರು ಹಾಗೂ ಕೈಗಾರಿಕೋದ್ಯಮ ಕ್ಷೇತ್ರದಿಂದ ಬೆಳ್ಳಿ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಪ್ರತಿ ಕೆಜಿಗೆ 250 ರೂಪಾಯಿಗಳ ಏರಿಕೆಯಾಗಿ, 29,850 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಚಿನ್ನದ ಖರೀದಿಯಲ್ಲಿ ಇಳಿಕೆ ಕಂಡಿತ್ತು.ಆದರೆ ಇಂದಿನ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ಕಂಡಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1.40 ಡಾಲರ್‌ಗಳಷ್ಟು ಏರಿಕೆಯಾಗಿ 1,241ಡಾಲರ್‌ಗಳಿಗೆ ತಲುಪಿದೆ.ಹಿಂದಿನ ದಿನದ ವಹಿವಾಟಿನಲ್ಲಿ 23.90 ಡಾಲರ್‌ಗಳಷ್ಟು ಇಳಿಕೆ ಕಂಡಿತ್ತು.
ಬೆಳ್ಳಿಯ ನಾಣ್ಯಗಳ ದರದಲ್ಲಿ ಕೂಡಾ 100 ರೂಪಾಯಿಗಳಷ್ಟು ಏರಿಕೆಯಾಗಿ,ಖರೀದಿ ದರ (100 ನಾಣ್ಯಗಳಿಗೆ) 34,600 ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.