ಹಾಲು, ತರಕಾರಿ ಮತ್ತು ದ್ವಿದಳ ಧಾನ್ಯಗಳ ದರಗಳಲ್ಲಿ ಏರಿಕೆಯಾಗಿದ್ದರಿಂದ, ಜೂನ್ 12ಕ್ಕೆ ವಾರಂತ್ಯಗೊಂಡಂತೆ ವಾರ್ಷಿಕ ಅಹಾರ ಹಣದುಬ್ಬರ ದರ ಮತ್ತೆ ಏರಿಕೆ ಕಂಡು ಶೇ.16.90ಕ್ಕೆ ತಲುಪಿದೆ.
ವಾರ್ಷಿಕ ಅಹಾರ ಹಣದುಬ್ಬರ ದರ, ಕಳೆದ ವಾರದ ಅವಧಿಯಲ್ಲಿ ಶೇ.16.12ಕ್ಕೆ ತಲುಪಿತ್ತು.
ದ್ವಿದಳ ಧಾನ್ಯ ದರಗಳು ಕಳೆದ ವರ್ಷದ ಜೂನ್ ತಿಂಗಳ ಎರಡನೇ ವಾರಕ್ಕೆ ಹೋಲಿಸಿದಲ್ಲಿ ಶೇ.34.14ರಷ್ಟು ಏರಿಕೆಯಾಗಿದೆ. ಹಾಲು ದರದಲ್ಲಿ ಶೇ.21.12ರಷ್ಟು ಹೆಚ್ಚಳವಾಗಿದೆ.
ಏತನ್ಮಧ್ಯೆ, ಆಲೂಗಡ್ಡೆ ಮತ್ತು ಈರುಳ್ಳಿ ದರಗಳು ಕ್ರಮವಾಗಿ ಶೇ.36.99 ಹಾಗೂ ಶೇ.22.42 ರಷ್ಟು ಇಳಿಕೆ ಕಂಡಿದೆ.
ತರಕಾರಿ ದರಗಳು ಶೇ.8.06ರಷ್ಟು ಏರಿಕೆ ಕಂಡಿವೆ.ಉದ್ದು ಮೂಂಗ್‌ದಾಲ್ ಮತ್ತು ಟೀ ದರಗಳು ಕಳೆದ ವಾರಕ್ಕೆ ಹೋಲಿಸಿದಲ್ಲಿ ಶೇ.1ರಷ್ಟು ಏರಿಕೆ ಕಂಡಿವೆ.
ಏತನ್ಮಧ್ಯೆ,ಮಟನ್ ದರದಲ್ಲಿ ಶೇ.2ರಷ್ಟು ಇಳಿಕೆ ಕಂಡಿದ್ದು,ಸೀ ಫಿಶ್ ಮತ್ತು ಅರ್ಹಾರ್ ದರಗಳಲ್ಲಿ ಶೇ.1ರಷ್ಟು ಇಳಿಕೆ ಕಂಡಿದೆ.
ಅಹಾರ ಹಣದುಬ್ಬರ ದರ ಹೆಚ್ಚಳದಿಂದ ಒಟ್ಟಾರೆ ಹಣದುಬ್ಬರ ದರ ಏರಿಕೆಗೆ ಮೂಲಕಾರಣವಾಗಿದ್ದು,ಮೇ ತಿಂಗಳ ಅವಧಿಯಲ್ಲಿ (ಶೇ.10.16)ಎರಡಂಕಿಗೆ ತಲುಪಿದೆ.
ಕಳೆದ ಡಿಸೆಂಬರ್ 2009ರ ಅವಧಿಯಲ್ಲಿ ಖಾದ್ಯ ದರಗಳಲ್ಲಿ ಶೇ.20ರಷ್ಟು ಏರಿಕೆಯಾಗಿತ್ತು. ಕಳೆದ ವರ್ಷ ಮುಂಗಾರು ಮಳೆ ವೈಫಲ್ಯದಿಂದಾಗಿ ಶೇ.80ರಷ್ಟು ಕೃಷಿ ಭೂಮಿಯ ಉತ್ಪಾದನೆ ಕುಂಠಿತಗೊಂಡಿತು.ದೇಶಧ ಶೇ.60ರಷ್ಟು ಕೃಷಿ ಭೂಮಿ ಮಳೆಯ ಮೇಲೆ ಅವಲಂಬಿತವಾಗಿದೆ.