ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಆರು ಮಂದಿ ನಾಯಕರೊಂದಿಗೆ ದ್ವಿಪಕ್ಷೀಯ ಮಾಕುಕತೆ ನಡೆಸಲಿದ್ದು, ಏಷ್ಯಾದ ಐವರು ಪ್ರಧಾನಮಂತ್ರಿಗಳು ಹಾಗೂ ಬ್ರಿಟನ್‌ನ ನೂತನ ಪ್ರಧಾನಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಚೀನಾದ ಅಧ್ಯಕ್ಷ ಹು ಜಿಂಟಾವೊ, ದಕ್ಷಿಣ ಕೊರಿಯಾ ಅಧ್ಯಕ್ಷ ಲಿ ಮೈಯಾಂಗ್ -ಬಾಕ್, ಜಪಾನ್ ಪ್ರಧಾನಿ ನಾವೊಟೊ ಕಾನ್ ಮತ್ತು ಇಂಡೋನೇಷಿಯಾ ಅಧ್ಯಕ್ಷ ಸುಸಿಲೊ ಬಂಬಾಂಗ್ ಯೊಧೊಯೊನೊ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಜಿ20 ರಾಷ್ಟ್ರಗಳ ಸಭೆಯಲ್ಲಿ ಏಷ್ಯಾ-ಫೆಸಿಫಿಕ್ ನಾಯಕರೊಂದಿಗಿನ ಸಭೆಯ ವಿವರಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅನಾಮಧೇಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರಿಟನ್‌ನ ನೂತನ ಪ್ರದಾನಿ ಡೇವಿಡ್ ಕ್ಯಾಮಾರೂನ್ ಅವರನ್ನು ಬರಾಕ್ ಒಬಾಮಾ, ಮೊದಲ ಬಾರಿ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.