ಇಂಧನ ದರಗಳ ಏರಿಕೆಯ ನಿಯಮಾವಳಿಗಳನ್ನು ರೂಪಿಸಲು ನಾಳೆ ಸಭೆ ಸೇರಲಿರುವ ಅಧಿಕಾರಯುತ ಸಚಿವ ಸಂಪುಟ ಸಮಿತಿ, ಪೆಟ್ರೋಲ್, ಡೀಸೆಲ್ ದರಗಳನ್ನು ಏರಿಕೆ ಘೋಷಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಯುತ ಸಚಿವ ಸಂಪುಟ ಸಮಿತಿ, ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅವರ ಇಚ್ಚೆಯಂತೆ ಸರಕಾರದ ನಿಯಂತ್ರಣದಿಂದ ಇಂದನ ದರ ಏರಿಕೆ ನಿಯಂತ್ರಣವನ್ನು ಮುಕ್ತಗೊಳಿಸುವುದು ಹಾಗೂ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 3.73 ರೂಪಾಯಿಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಸಮ್ಮತಿ ಸೂಚಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲ್ ದರ ಏರಿಕೆಗೆ ವಿರೋಧ ಪಕ್ಷಗಳು ಹಾಗೂ ಯುಪಿಎ ಮೈತ್ರಿಕೂಟದ ಪಕ್ಷಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ದರ ಏರಿಕೆ ನೆನೆಗುದಿಗೆ ಬಿದ್ದಿದೆ. ಹಣದುಬ್ಬರ ನಿರಂತರ ಏರಿಕೆಯತ್ತ ಸಾಗಿದ್ದು,ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಘೋಷಿಸಿದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರಕಾರದ ನಿಯಂತ್ರಣದಿಂದ ಪೆಟ್ರೋಲ್ ದರ ಏರಿಕೆಯನ್ನು ಮುಕ್ತಗೊಳಿಸುವುದರಿಂದ,ಹಲವು ಅಡೆತಡೆಗಳು ಎದುರಾಗಲಿವೆ ಎಂದು ಮೂಲಗಳು ತಿಳಿಸಿವೆ.