ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕ ಕಂಪೆನಿಯ ಶೇ.45ರಷ್ಟು ಶೇರು ಖರೀದಿ: ರಿಲಯನ್ಸ್ (Reliance Industries | Pioneer Natural Resources | Acquire | Agreement)
Bookmark and Share Feedback Print
 
ಅಮೆರಿಕ ಮೂಲದ ಪಯೋನೀರ್ ನ್ಯಾಚುರಲ್ ರಿಸೊರ್ಸೆಸ್ ಕಂಪೆನಿಯ ಶೇ.45ರಷ್ಟು ಶೇರುಗಳನ್ನು 5,300 ಕೋಟಿ ರೂಪಾಯಿಗಳನ್ನು ಪಾವತಿಸಿ ಖರೀದಿಸಲಾಗಿದೆ ಎಂದು ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್ ಮೂಲಗಳು ತಿಳಿಸಿವೆ.

ಈಗಲ್ ಫೋರ್ಡ್ ಗ್ರೂಪ್‌ನ ಪಯೋನೀರ್ ಕಂಪೆನಿಯ ಶೇ.45ರಷ್ಟು ಶೇರುಗಳನ್ನು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಪಯೋನೀರ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿವೆ.

ಪಯೋನೀರ್ ಸಂಸ್ಥೆ , ಪ್ರತಿ ದಿನ 212,000 ಎಕರೆ ಪ್ರದೇಶಗಳಲ್ಲಿರುವ ಐದು ಬಾವಿಗಳ ಮೂಲಕ 28 ಮಿಲಿಯನ್ ಕ್ಯೂಬಿಕ್ ಅಡಿ ಅನಿಲವನ್ನು ಉತ್ಪಾದಿಸುತ್ತಿದೆ. ಒಪ್ಪಂದದ ನಂತರ 95,300 ಎಕರೆ ಪ್ರದೇಶ ರಿಲಯನ್ಸ್ ಒಡೆತನದ ವ್ಯಾಪ್ತಿಗೆ ಬಂದಂತಾಗಿದೆ.

ರಿಲಯ್ನಸ್ ಇಂಡಸ್ಟೀಸ್ ಪಯೋನೀರ್ ಕಂಪೆನಿಗೆ 266 ಮಿಲಿಯನ್ ಡಾಲರ್‌ಗಳನ್ನು ಪಾವತಿಸಬೇಕಾಗಿದ್ದು,ಹೆಚ್ಚುವರಿಯಾಗಿ 879 ಮಿಲಿಯನ್ ಡಾಲರ್‌ಗಳನ್ನು ನೀಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್ ಹಾಗೂ ಈಗಲ್ ಫೋರ್ಡ್ ಮಧ್ಯದ ಒಪ್ಪಂದದಿಂದಾಗಿ, 2010ರ ಜೂನ್ 1ರಿಂದ ರಿಲಯನ್ಸ್ ಈಗಲ್‌ಪೋರ್ಡ್ ಎನ್ನುವ ಹೆಸರಿನಿಂದ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ