ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಡಬ್ಲೂಎ ಶುಲ್ಕ ಪಾವತಿಸಿದ ಬಿಎಸ್‌ಎನ್‌ಎಲ್ (BSNL | BWA spectrum | PSU | Government | Penalty)
Bookmark and Share Feedback Print
 
ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆ, ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಸ್ಪೆಕ್ಟ್ರಂನ ಪರವಾನಿಗಿ ಶುಲ್ಕವಾದ 8,313.8 ಕೋಟಿ ರೂಪಾಯಿಗಳನ್ನು ಪಾವತಿಸಿದ್ದು,ಗಡುವ ಮುಂಗಿದ ಎರಡು ದಿನಗಳ ನಂತರ ಪಾವತಿಸಿದ್ದರಿಂದ, 30 ಕೋಟಿ ರೂಪಾಯಿ ದಂಡವನ್ನು ಭರಿಸಿದೆ.

ಇದರಿಂದಾಗಿ, ಕೇಂದ್ರ ಸರಕಾರಕ್ಕೆ ಬಿಡಬ್ಲೂಎ ತರಂಗಾಂತರಗಳ ಮಾರಾಟದಿಂದಾಗಿ ಒಟ್ಟು 38,543.31ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿದಂತಾಗಿದೆ.

ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸಂಸ್ಥೆ ಗುರುವಾರದಂದು ಬಿಡಬ್ಲೂಎ ಶುಲ್ಕವನ್ನು ಪಾವತಿಸಿದ್ದು,ಯಾವುದೇ ದಂಡ ಪಾವತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕಿಂತ ಮೊದಲು, ಬಿಎಸ್‌ಎನ್‌ಎಲ್ ಸಂಸ್ಥೆ ಹಣಕಾಸಿನ ಕೊರತೆಯಿಂದಾಗಿ 5 ದಿನಗಳೊಳಗಾಗಿ ಬಿಡಬ್ಲೂಎ ತರಂಗಾಂತರಗಳ ಶುಲ್ಕ ಪಾವತಿ ಮಾಡಲು ಅನುಮತಿ ಪಡೆದಿತ್ತು.ಬಿಡಬ್ಲೂಎ ತರಂಗಾಂತರಗಳನ್ನು ಪಡೆದ ಕಂಪೆನಿಗಳಾದ ಎಂಟಿಎನ್‌ಎಲ್ ಸೇರಿದಂತೆ ಇತರ ಕಂಪೆನಿಗಳು ಜೂನ್ 22ರೊಳಗಾಗಿ ಶುಲ್ಕವನ್ನು ಪಾವತಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ