ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಸಿಎಲ್ ಮುಖ್ಯಸ್ಥರಿಂದ ಶಿಕ್ಷಣಕ್ಕೆ 580 ಕೋಟಿ ರೂ.ದೇಣಿಗೆ (Shiv Nadar | Donate | Education | HCL Technologies | Shiv Nadar Foundation)
ಎಚ್‌ಸಿಎಲ್ ಮುಖ್ಯಸ್ಥರಿಂದ ಶಿಕ್ಷಣಕ್ಕೆ 580 ಕೋಟಿ ರೂ.ದೇಣಿಗೆ
ನವದೆಹಲಿ, ಶುಕ್ರವಾರ, 25 ಜೂನ್ 2010( 15:05 IST )
ಉದಾರ ದೇಣಿಗೆ ನೀಡುವ ಮೊದಲ ಹೆಜ್ಜೆಯ ಅಂಗವಾಗಿ, ಎಚ್‌ಸಿಎಲ್ ಮುಖ್ಯಸ್ಥ ಶಿವ್ ನಡಾರ್,ತಮ್ಮ ಕುಟುಂಬದ ಶೇ.2.5ರಷ್ಟು ಶೇರುಗಳನ್ನು ಮಾರಾಟ ಮಾಡಿ 580 ಕೋಟಿ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕೆ ದೇಣಿಗೆಯನ್ನು ನೀಡಿದ್ದಾರೆ.
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್ ಟೆಕ್ನಾಲಾಜೀಸ್‌ನ ಶೇ.2.5ರಷ್ಟು ಶೇರುಗಳನ್ನು, ಎಚ್‌ಸಿಎಲ್ ಕಾರ್ಪೋಪೇಶನ್‌ಗೆ ಮಾರಾಟ ಮಾಡಿ, ಶಿವ್ ನಡಾರ್ ಫೌಂಡೇಶನ್‌ನ ಶೈಕ್ಷಣಿಕೆ ಸೇವೆಗೆ ಬಳಸಲು ದೇಣಿಗೆಯನ್ನು ನೀಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ದೇಶದ ಬೃಹತ್ ಕಂಪೆನಿಗಳು ನಿಗದಿಪಡಿಸಿದ ದೇಣಿಗೆ ಮೊತ್ತಕ್ಕಿಂತ ನಡಾರ್ ನೀಡಿದ ದೇಣಿಗೆ ಗರಿಷ್ಠ ಮೊತ್ತದ್ದಾಗಿದೆ. ದೇಶದಲ್ಲಿ ಕಳೆದ ವರ್ಷ ಬೃಹತ್ ಕಂಪೆನಿಗಳು ಒಟ್ಟು 3,487.12 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದ್ದವು ಎಂದು ಅಧ್ಯಯನ ಸಂಸ್ಥೆ ಬೆನ್ ಆಂಡ್ ಕಂಪೆನಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಟೆಕ್ ಮಹೀಂದ್ರಾ ವ್ಯವಸ್ಥಾಪಕ ನಿರ್ದೇಶಕ ವಿನೀತ್ ನಯ್ಯರ್, ನವದೆಹಲಿಯಲ್ಲಿ ತಮ್ಮ ಪತ್ನಿ ಸಂಚಾಲಿತ ಧರ್ಮಾರ್ಥ ಸಂಸ್ಥೆಗೆ 30 ಕೋಟಿ ರೂಪಾಯಿಗಳನ್ನು ನೀಡಿದ್ದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್ಫೋಸಿಸ್‌ನ ನಾರಾಯಣ್ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ, ಮಿಲಿಯನ್‌ಗಟ್ಟಲೆ ಹಣವನ್ನು ಧರ್ಮಾರ್ಥ ಸಂಸ್ಥೆಗಳಿಗೆ ದಾನವಾಗಿ ನೀಡಿ, ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ.
ಫೋರ್ಬ್ಸ್‌ನ ಏಷ್ಯಾ-ಫೆಸಿಫಿಕ್ ಪ್ರತಿಷ್ಠಿತ ಉದ್ಯಮಿಗಳ ಸಾಲಿನಲ್ಲಿ ಶಿವ್ ನಡಾರ್ ಪತ್ನಿ ಕಿರಣ್ ನಡಾರ್ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿಯವರ ಪತ್ನಿ ರೋಹಿಣಿ ನಿಲೇಕಣಿ ಸೇರ್ಪಡೆಯಾಗಿದ್ದಾರೆ.
ರೋಹಿಣಿ, ಶಿಕ್ಷಣ, ಮೈಕ್ರೋಫೈನಾನ್ಸ್, ಆರೋಗ್ಯ ಮತ್ತು ಪರಿಸರ ಕ್ಷೇತ್ರಗಳಿಗೆ 40 ಮಿಲಿಯನ್ ಡಾಲರ್‌ಗಳಿಗೂ ಹೆಚ್ಚು ಹಣವನ್ನು ದೇಣಿಗೆ ನೀಡಿದ್ದಾರೆ.