ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜುಲೈ21ರಂದು ಪ್ರಣಬ್, ಹಣಕಾಸು ಸಚಿವರ ಸಭೆ (Pranab Mukherjee | Constitutional amendments | GST | Finance ministers)
Bookmark and Share Feedback Print
 
ಮುಂಬರುವ ಆರ್ಥಿಕ ವರ್ಷದಲ್ಲಿ ಜಾರಿಗೆ ತರಲು ಉದ್ದೇಶಿಸಲಾದ ಸರಕು ಮತ್ತು ಸೇವಾ ತೆರಿಗೆಗೆ ಅಗತ್ಯವಾದ ಸಂವಿಧಾನಿಕ ತಿದ್ದುಪಡಿಗಳ ಕುರಿತಂತೆ ಚರ್ಚಿಸಲು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಜುಲೈ 21ರಂದು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಸಭೆಯನ್ನು ಕರೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದನ್ನು ಹೊರತುಪಡಿಸಿ, ಪರೋಕ್ಷ ತೆರಿಗೆ ಜಾರಿಗೆ ತರುವಲ್ಲಿ ರಾಜ್ಯಗಳಿಗೆ ಆರ್ಥಿಕ ನಷ್ಟ ಎದುರಾದಲ್ಲಿ ಪರಿಹಾರ ಪ್ಯಾಕೇಜ್‌ಗಳನ್ನು ನೀಡುವ ಬಗ್ಗೆ ಕೂಡಾ ಸಚಿವ ಮುಖರ್ಜಿ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಜುಲೈ21ರಂದು ಎಲ್ಲಾ ರಾಜ್ಯಗಳ ಹಣಕಾಸು ಸಚಿವರೊಂದಿಗೆ, ಸರಕು ಮತ್ತು ಸೇವಾ ತೆರಿಗೆಗಾಗಿ ಸಂವಿಧಾನ ತಿದ್ದುಪಡಿ ಮತ್ತು ಪರಿಹಾರ ಪ್ಯಾಕೇಜ್‌ಗಳ ಕುರಿತಂತೆ ಚರ್ಚಿಸಲಿದ್ದಾರೆ ಎಂದು ವಿತ್ತಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಣಬ್ ಮುಖರ್ಜಿಯವರಿಗೆ ಭೇಟಿಯಾಗುವ ಮುನ್ನ ಹಣಕಾಸು ಸಚಿವರು ಸರಕು ಮತ್ತು ಸೇವೆ ತೆರಿಗೆ ಜಾರಿ ಕುರಿತಂತೆ ಕೇಂದ್ರದ ಕಾನೂನು ಸಚಿವಾಲಯ ಸಿದ್ಧಪಡಿಸಿದ ಸಂವಿಧಾನಿಕ ತಿದ್ದುಪಡಿಯ ಕುರಿತಂತೆ ಪರಸ್ಪರ ಚರ್ಚಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ