ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶಗಳಲ್ಲಿ ದೊರಕಿಸುವ ನೀತಿಗಳನ್ನು ಜಾರಿಗೆ ತರುವಲ್ಲಿ ವಿಫಲವಾದ ಕೇಂದ್ರ ಸರಕಾರ, ಕೈಗಾರಿಕೋದ್ಯಮದಲ್ಲಿ ಶೇ.5ರಷ್ಟು ಉದ್ಯೋಗಗಳನ್ನು ಬಡವರಿಗೆ ಮೀಸಲಾಗಿಡಿ ಎಂದು ಕೋರಿದೆ.
ಕೇಂದ್ರ ಸರಕಾರ ಕೈಗಾರಿಕೋದ್ಯಮ ಸಂಘಟನೆಗಳಾದ ಸಿಐಐ, ಎಫ್‌ಐಸಿಸಿಐ ಮತ್ತು ಅಸೋಚಾಮ್ ಅಡಳಿತ ಮಂಡಳಿಗಳಿಗೆ ಪತ್ರ ಬರೆದಿದೆ.
ಕಳೆದ ಏಪ್ರಿಲ್ ತಿಂಗಳ ಅವಧಿಯಲ್ಲಿ, ಕೇಂದ್ರ ಸರಕಾರದ ಅಧಿಕಾರಿಗಳು ಹಾಗೂ ವಾಣಿಜ್ಯ ಚೇಂಬರ್‌ಗಳ ಮಧ್ಯೆ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ, ಬಡವರಿಗೆ ಉದ್ಯೋಗದಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ
ಖಾಸಗಿ ಕ್ಷೇತ್ರದಲ್ಲಿ ಕೋಟಾ ಅಳವಡಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಆದರೆ, ಕೇಂದ್ರ ಸರಕಾರ ಉತ್ತೇಜನ ನೀಡುತ್ತಿರುವ ಕ್ಷೇತ್ರಗಳಲ್ಲಿ ಕನಿಷ್ಠ ಶೇ.5ರಷ್ಟು ಉದ್ಯೋಗಗಳನ್ನು ಬಡವರಿಗೆ ಮೀಸಲಾಗಿಡಬೇಕು ಎಂದು ಕೇಂದ್ರ ಕೈಗಾರಿಕೋದ್ಯಮ ಕಾರ್ಯದರ್ಶಿ ಆರ್.ಪಿ.ಸಿಂಗ್ ತಿಳಿಸಿದ್ದಾರೆ.
ಅದನ್ನು ಹೊರತುಪಡಿಸಿ, ವಿಶೇಷ ಆರ್ಥಿಕ ವಲಯಗಳಲ್ಲಿ ಹಾಗೂ ಸಾಫ್ಟ್‌ವೇರ್ ಟೆಕ್ನಾಲಾಜೀಸ್ ಪಾರ್ಕ್‌ಗಳ ರಫ್ತು ಆದಾಯದಲ್ಲಿ ತೆರಿಗೆ ವಿನಾಯಿತಿಯನ್ನು ಕೂಡಾ ಘೋಷಿಸಲಾಗಿದೆ.