ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದ್ದ ಸುಭೀಕ್ಷಾ ಸಂಸ್ಥೆ, ಆರ್ಥಿಕ ಪರಿಸ್ಥಿತಿಯ ಕುರಿತಂತೆ ಐಸಿಐಸಿಐ ಬ್ಯಾಂಕ್‌ಗೆ ಎಸಗಿದ ವಂಚನೆಯ ಕುರಿತಂತೆ, ಹಗರಣವನ್ನು ಗಂಭೀರ ವಂಚನೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಕಾರ್ಪೋರೇಟ್ ವ್ಯವಹಾರಗಳ ಖಾತೆಯ ಸಚಿವ ಖುರ್ಷಿದ್ ಮಾತನಾಡಿ, ಸುಭೀಕ್ಷಾ ಸಂಸ್ಥೆಯ ಕುರಿತಂತೆ ರಿಜಿಸ್ಟಾರ್ ಆಪ್ ಕಂಪೆನೀಸ್ ವರದಿಗಳನ್ನು ಗಂಭೀರ ಅಪರಾಧ ಪತ್ತೆ ದಳಕ್ಕೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಗಂಭೀರ ಅಪರಾಧ ತನಿಖಾ ದಳಕ್ಕೆ ಪ್ರಕರಣವನ್ನು ಒಪ್ಪಿಸುವುದರಿಂದ ನ್ಯಾಯ ದೊರೆತಂತಲ್ಲ. ದೆಹಲಿಗೆ ತೆರಳಿದ ನಂತರ ವರದಿಯ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಸಚಿವ ಖುರ್ಷಿದ್ ಹೇಳಿದ್ದಾರೆ.