ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ದೇಶದ ಜಿಡಿಪಿ ದರ ಶೇ.9.5ಕ್ಕೆ ತಲುಪಲಿದೆ ಎನ್ನುವ ಐಎಂಎಫ್ ವರದಿಗೆ ಪ್ರತ್ರಿಕ್ರಿಯೆ ನೀಡಿದ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಆರ್ಥಿಕ ವರ್ಷಾಂತ್ಯಕ್ಕೆ ಜಿಡಿಪಿ ದರ ಒಂದು ವೇಳೆ ಶೇ.8.5ಕ್ಕೆ ತಲುಪಿದಲ್ಲಿ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ನಮಗೆ ಹಾಗೂ ಐಎಂಎಫ್‌ನೊಂದಿಗೆ ಸದಾ ವಿವಾದ ಎದುರಾಗುತ್ತದೆ.ಆದರೆ, ದೇಶದ ಆರ್ಥಿಕ ವೃದ್ಧಿ ದರ ಚೇತರಿಕೆಯಾಗಲಿದೆ ಎನ್ನುವ ಐಎಂಎಫ್ ಅಧ್ಯಯನ ವರದಿಯನ್ನು ಒಪ್ಪಿಕೊಳ್ಳುವುದಾಗಿ ಕೈಗಾರಿಕೋದ್ಯಮ ಸಂಘಟನೆ ಸಿಐಐ ಆಯೋಜಿಸಿದ ಸಭೆಯಲ್ಲಿ ಮುಖರ್ಜಿ ತಿಳಿಸಿದ್ದಾರೆ.
ದೇಶದ ಆರ್ಥಿಕ ವೃದ್ಧಿ ದರದ ಬಗ್ಗೆ ನನಗೆ ಇವತ್ತಿಗೂ ಆತಂಕವಿದೆ.ಆದರೆ, ಜಿಡಿಪಿ ದರ ಶೇ.8.5ಕ್ಕೆ ತಲುಪಿದಲ್ಲಿ ನನಗೆ ಸಂತೋಷವಾಗುತ್ತದೆ ಎಂದು ಮುಖರ್ಜಿ ಹೇಳಿದ್ದಾರೆ.