ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಅರ್ಧಾವಧಿಯಲ್ಲಿ ಸಾಲ ವಿಚರಣೆಯಲ್ಲಿ ಚೇತರಿಕೆಯಾಗುವ ನಿರೀಕ್ಷೆಗಲಿಂದಾಗಿ, ಸೆಪ್ಟೆಂಬರ್ ನಂತರ ಬಡ್ಡಿ ದರಗಳು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಅರ್ಧಾವಧಿಯಲ್ಲಿ, ನಗದು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವುದರಿಂದ, ಸಾಲದ ಬೇಡಿಕೆಯಲ್ಲಿ ಹೆಚ್ಚಳವಾಗಬಹುದು ಎಂದು ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೋಚರ್, ಸಿಐಐ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಮುಂಬರುವ ವರ್ಷದಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಕೋಚರ್ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ಮೂಲದರವನ್ನು ಘೋಷಿಸಿದ್ದರಿಂದ, ಬಡ್ಡಿ ದರ ಏರಿಕೆಯ ಪ್ರಭಾವ ಕಂಡುಬರುವುದಿಲ್ಲ.ಪ್ರಸ್ತುತ ನಗದು ಹರಿವಿನ ಪ್ರಮಾಣ ತೃಪ್ತಿಕರವಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರುತ್ತಿರುವುದರಿಂದ, ಆರ್ಥಿಕ ವರ್ಷದ ಎರಡನೇ ಅರ್ಧಾವಧಿಯಲ್ಲಿ ನಗದು ಹರಿವಿನ ಹೆಚ್ಚಳದಿಂದಾಗಿ, ಸಾಲದ ಬೇಡಿಕೆಯಲ್ಲಿ ಕೂಡಾ ಹೆಚ್ಚಳವಾಗಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೋಚರ್ ವಿವರಣೆ ನೀಡಿದ್ದಾರೆ.