ಜೂನ್ ತಿಂಗಳಲ್ಲಿ 2.8ಮಿಲಿಯನ್ ಗ್ರಾಹಕರ ಸೇರ್ಪಡೆ: ಆರ್‌ಕಾಂ
ನವದೆಹಲಿ, ಸೋಮವಾರ, 19 ಜುಲೈ 2010( 16:26 IST )
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಕಮ್ಯೂನಿಕೇಶನ್ಸ್(ಆರ್‌ಕಾಮ್) ಜೂನ್ ತಿಂಗಳ ಅವದಿಯಲ್ಲಿ 2.8 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸುವ ಮೂಲಕ ಒಟ್ಟು 110 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದಂತಾಗಿದೆ.
ಕಳೆದ ಜೂನ್ ತಿಂಗಳ ಅವಧಿಯಲ್ಲಿ (ಜಿಎಸ್‌ಎಂ ಮತ್ತು ಸಿಡಿಎಂಎ ) 2.8 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಆರ್‌ಕಾಂ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ 8.4 ಮಿಲಿಯನ್ ಮೊಬೈಲ್ ಗ್ರಾಹಕರನ್ನು, ಸೇರ್ಪಡೆಗೊಳಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಮೇ ತಿಂಗಳ ಅವಧಿಯಲ್ಲಿ 16.3 ಮಿಲಿಯನ್ ಗ್ರಾಹಕರನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸುವುದರೊಂದಿಗೆ, 2010ರ ಮೇ ತಿಂಗಲಾಂತ್ಯಕ್ಕೆ ದೇಶದಲ್ಲಿ ಒಟ್ಟು 617.53 ಮೊಬೈಲ್ ಗ್ರಾಹಕರನ್ನು ಹೊಂದಿದಂತಾಗಿದೆ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.