ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿ ಏರ್‌ಟೆಲ್,ದೀಪಾವಳಿಯವರೆಗೆ ಐಫೋನ್ 4 ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಆಪಲ್ ಕಂಪೆನಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.ಮುಂಬರುವ ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ಬಹುತೇಕ ಐಫೋನ್ 4 ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕಿಂತ ಮೊದಲು, ವೋಡಾಫೋನ್ ಎಸ್ಸಾರ್ ಟೆಲಿಕಾಂ ಸಂಸ್ಥೆ, ಸಮಯದ ಗಡುವನ್ನು ನೀಡದೆ, ಐಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿತ್ತು.
ಭಾರ್ತಿ ಏರ್‌ಟೆಲ್ ಸಂಸ್ಥೆ,ಈಗಾಗಲೇ 3ಜಿಎಸ್ ಐಫೋನ್‌ಗಳನ್ನು ಮಾರಾಟ ಮಾಡುತ್ತಿದ್ದು, 16ಜಿಬಿ ಮಾಡೆಲ್‌ನ ಐಫೋನ್‌ಗೆ 35,500 ರೂಪಾಯಿ ಮತ್ತು 32ಜಿಬಿ ಮಾಡೆಲ್‌ನ ಐಫೋನ್ ದರವನ್ನು 41,500 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಅಮೆರಿಕ ಮೂಲದ ಆಪಲ್ ಕಂಪೆನಿ, ಐಪೋಡ್, ಐಫೋನ್ ಮತ್ತು ಐಪ್ಯಾಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.ಕಳೆದ ತಿಂಗಳು ಅತ್ಯಾಧುನಿಕ ಸ್ಕ್ರೀನ್ ಮತ್ತು ಅತ್ಯುತ್ತಮ ತಂತ್ರಜ್ಞಾನಗಳನ್ನೊಳಗೊಂಡ ಐಫೋನ್ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಹೇಳಿಕೆ ನೀಡಿತ್ತು