ದೇಶದ ಕಾರು ತಯಾರಿಕೆ ಕಂಪೆನಿಗಳಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ,ಉತ್ಪಾದನೆಯ ಕೊರತೆಯಿಂದಾಗಿ ಕಳೆದ ವರ್ಷದಷ್ಟು ಮಾತ್ರ ಕಾರುಗಳನ್ನು ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ರಫ್ತು ವಹಿವಾಟಿನಲ್ಲಿ ಇತರ ಕಾರು ತಯಾರಿಕೆ ಕಂಪೆನಿಗಳೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಉತ್ಪಾದನೆಯ ಕೊರತೆಯಿಂದಾಗಿ ರಫ್ತು ವಹಿವಾಟಿನಲ್ಲಿ ಕಡಿತಗೊಳಿಸುತ್ತಿದ್ದೇವೆ ಎಂದು ಮಾರುತಿ ಸುಝುಕಿ ಮುಖ್ಯಸ್ಥ ಆರ್.ಸಿ.ಭಾರ್ಗವಾ ಹೇಳಿದ್ದಾರೆ.
2008-09ರ ಅವಧಿಯಲ್ಲಿ ಕಂಪೆನಿ 1.47 ಲಕ್ಷ ಕಾರುಗಳನ್ನು ರಫ್ತು ಮಾಡಿತ್ತು. ಏಕೈಕ ಎ-ಸ್ಟಾರ್ ಮಾಡೆಲ್‌ನ 1.27 ಲಕ್ಷ ಕಾರುಗಳನ್ನು ರಫ್ತು ಮಾಡಲಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯ ಎ-ಸ್ಟಾರ್ ಮಾಡೆಲ್ ಕಾರು ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ನೆದರ್‌ಲೆಂಡ್ ಸೇರಿದಂತೆ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.ಯುರೋಪ್ ರಾಷ್ಟ್ರಗಳನ್ನು ಹೊರತುಪಡಿಸಿ, ಅರ್ಜೇರಿಯಾ, ಚಿಲಿ, ಇಂಡೋನೇಷ್ಯಾ ಮತ್ತು ಇತರ ನೆರೆಯ ರಾಷ್ಟ್ರಗಳಿಗೆ ಕಾರುಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.