ಸಿಗರೇಟು ಸೇದುವ ಹವ್ಯಾಸವಿರುವ ವ್ಯಕ್ತಿಗಳಿಗೆ,ಸರಕಾರದಲ್ಲಿ ಉನ್ನತ ಶ್ರೇಣಿಯ ಉದ್ಯೋಗಗಳನ್ನು ನಿಷೇಧಿಸಲಾಗಿದೆ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
ಸರಕಾರದ ನೂತನ ನಿಯಮಾವಳಿಗಳ ಪ್ರಕಾರ, ಉನ್ನತ ಅಧಿಕಾರ ವಹಿಸಿಕೊಳ್ಳುವ ಉದ್ಯೋಗಿಗಳು, ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಸಿಗರೇಟು , ಮದ್ಯಸೇವನೆ ಹಾಗೂ ಇತರ ಯಾವುದೇ ರೀತಿಯ ಮಾದಕ ವಸ್ತುಗಳ ದಾಸರಾಗಿರಬಾರದು ಎಂದು ಆದೇಶ ಹೊರಡಿಸಿದೆ.
ಏತನ್ಮಧ್ಯೆ, ದೇಶದಲ್ಲಿ ಮಧ್ಯಸೇವನೆಗೆ ನಿಷೇಧ ಹೇರಲಾಗಿದೆ.ಮಾದಕ ವಸ್ತುಗಳ ಸೇವನೆ ಅನಧಿಕೃತ ಕಾನೂನುಬಾಹಿರವಾಗಿದೆ. ಮುಂಬರುವ ದಿನಗಳಲ್ಲಿ ಸಿಗರೇಟು ಸೇವನೆಯನ್ನು ಕೂಡಾ ನಿಷೇಧಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
ಒಂದು ವೇಳೆ ಉನ್ನತ ಹುದ್ದೆಗಳ ಅಕಾಂಕ್ಷಿಗಳು, ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ತೋರಿದಲ್ಲಿ, ಉದ್ಯೋಗಿಗಳ ಆರೋಗ್ಯದ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಅಂತಿಮ ನಿರ್ಧಾರಕ್ಕೆ ಸರಕಾರ ಬದ್ಧವಾಗಿದೆ ಎಂದು ಸುದ್ದಿ ಸಂಸ್ಥೆ ಐಎಲ್‌ಎನ್‌ಎ ವರದಿ ಮಾಡಿದೆ.
ರಾಷ್ಟ್ರಾಧ್ಯಕ್ಷ ಮಹಮೂದ್ ಅಹ್ಮದಿನೇಜಾದ್, ಮಸೂದೆಗೆ ಹಸ್ತಾಕ್ಷರ ಹಾಕಿದ ನಂತರ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರದ ನೂತನ ನಿಯಮಗಳು, ಕೇವಲ ಉದ್ಯೋಗಿಗಳಿಗೆ ಅನ್ವಯಸುತ್ತದೆಯೋ ಅಥವಾ ಶಾಸಕರಿಗೆ ಹಾಗೂ ನ್ಯಾಯಾಂಗ ಇಲಾಖೆಗೆ ಅನ್ವಯಸುತ್ತದೆಯೋ ಎನ್ನುವ ಬಗ್ಗೆ ಸ್ಪಷ್ಟವಾಗಿಲ್ಲ ಎಂದು ಸರಕಾರಿ ಮೂಲಗಳು ತಿಳಿಸಿವೆ.