ದೇಶದಲ್ಲಿ ಮುಂಗಾರು ಮಳೆ ಇತ್ತೀಚೆಗೆ ದುರ್ಬಲವಾಗಿರುವುದರಿಂದ ಕಳವಳವಾಗಿಲ್ಲ ಕೃಷಿ ಸಚಿವಾಲಯದ ಕಾರ್ಯದರ್ಶಿ ಪ್ರಬೀರ್‌ಕುಮಾರ್ ಬಸು ಹೇಳಿದ್ದಾರೆ.
ದೇಶದ ಶೇ.60 ರಷ್ಟು ಕೃಷಿ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದ್ದು, ಜುಲೈ14ಕ್ಕೆ ವಾರಂತ್ಯಗೊಂಡಂತೆ ಶೇ.24ರಷ್ಟು ಮುಂಗಾರು ಮಳೆಯಾಗಿದ್ದು,ಸಾಮಾನ್ಯ ಮುಂಗಾರು ಮಳೆಗಿಂತ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ಬಹಿರಂಗಪಡಿಸಿದೆ.
ಕಳೆದ ಜೂನ್ ತಿಂಗಳ ಅವಧಿಯಲ್ಲಿ ಕೇವಲ ಶೇ16ರಷ್ಟು ಮುಂಗಾರು ಮಳೆಯಾಗಿತ್ತು. ಆದರೆ ಜುಲೈ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಹುಸಿಯಾಗಿದೆ.
ಮುಂಗಾರು ಮಳೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರೂ ಭತ್ತ, ಕಬ್ಬ ಮತ್ತು ಸೋಯಾಬೀನ್ ಬೆಳೆಗಳಿಗೆ ಹಾನಿಯಾಗಿಲ್ಲ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.