ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ದೇಶಿಯ ಚಿನಿವಾರಪೇಟೆಯಲ್ಲಿ ಕೂಡಾ ಚಿನ್ನದ ದರದಲ್ಲಿ ಪ್ರತಿ 10ಗ್ರಾಂಗೆ 25 ರೂಪಾಯಿಗಳ ಇಳಿಕೆಯಾಗಿ 18,475 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಆರ್ಥಿಕತೆ ನಿಧಾನಗತಿಯ ಚೇತರಿಕೆ ಕಾಣುತ್ತಿರುವುದರಿಂದ, ಜಾಗತಿಕ ಮಾರುಕಟ್ಟೆ ದುರ್ಬಲವಾಗಿದ್ದರಿಂದ ಚಿನ್ನದ ದರದಲ್ಲಿ ಇಳಿಕೆಯಾಗಲಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 2 ಡಾಲರ್‌ಗಳ ಕುಸಿತ ಕಂಡು 1,182.10 ಡಾಲರ್‌ಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ, ಹೂಡಿಕೆದಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ ಚಿನ್ನದ ದರದಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.