ರಫ್ತು ವಹಿವಾಟನ್ನು ಹೆಚ್ಚಿಸಲು ಸಾರ್ಕ್ ರಾಷ್ಟ್ರಗಳಿಗೆ ಕಾರುಗಳನ್ನು ರಫ್ತು ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಫಿಯೆಟ್ ಇಂಡಿಯಾ ಮೂಲಗಳು ತಿಳಿಸಿವೆ.
ಕಂಪೆನಿಯ ಉತ್ಪನ್ನಗಳಾದ ಪಾಲಿಯೋ, ಲಿನಿಯಾ ಮತ್ತು ಪುಂಟೊ ಮಾಡೆಲ್ ಕಾರುಗಳನ್ನು ನೇಪಾಳ, ಭೂತಾನ್,ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಸಾರ್ಕ್ ರಾಷ್ಟ್ರಗಳಿಗೆ ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ತರುಣ್ ಖನ್ನಾ ತಿಳಿಸಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ಫಿಯೆಟ್ ಕಂಪೆನಿ, ಪುಂಟೊ 1,100, ಲಿನಿಯಾ 360 ಮತ್ತು ಪಾಲಿಯೊ 650 ಕಾರುಗಳು ಸೇರಿದಂತೆ ಒಟ್ಟು 2000 ಕಾರುಗಳನ್ನು ದಕ್ಷಿಣ ಆಫ್ರಿಕಾಗೆ ರಫ್ತು ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಲಿನಿಯಾ ಮತ್ತು ಪುಂಟೊ ಸಿಎನ್‌ಜಿ ಮಾಡೆಲ್‌ಗಳನ್ನು ಮೇಲ್ದರ್ಜೇಗೇರಿಸಲು ಕಂಪೆನಿ ಯೋಜನೆಗಳನ್ನು ರೂಪಿಸಿದೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ತರುಣ್ ಖನ್ನಾ ತಿಳಿಸಿದ್ದಾರೆ.