ಕಬ್ಬಿಣ ಅದಿರು ರಫ್ತು ತೆರಿಗೆ ಹೆಚ್ಚಳಗೊಳಿಸುವ ಉಕ್ಕು ಸಚಿವಾಲಯ ನಿರ್ಧಾರದ ಬಗ್ಗೆ ಸ್ಪಷ್ಟ ಮಾಹಿತಿಯಿದೆ ಎಂದು ಉಕ್ಕು ಸಚಿವಾಲಯದ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರದ ಉಕ್ಕು ಖಾತೆ ಸಚಿವ ವೀರಭಧ್ರ ಸಿಂಗ್ ಮಾತನಾಡಿ, ದೇಶದ ಸಂಪನ್ಮೂಲವಾದ ಕಬ್ಬಿಣ ಅದಿರು ಸಂರಕ್ಷಿಸಲು, ಕಬ್ಬಿಣ ಅದಿರು ರಫ್ತು ವಹಿವಾಟಿನ ಮೇಲೆ ಶೇ.20ರಷ್ಟು ತೆರಿಗೆಯನ್ನು ಹೆಚ್ಚಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.
ಕೇಂದ್ರ ಸರಕಾರ, ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಕಬ್ಬಿಣ ಅದಿರು ರಫ್ತು ತೆರಿಗೆಯನ್ನು ಶೇ.5ರಷ್ಟು ಹೇರಿಕೆ ಘೋಷಿಸಿತ್ತು. ನಂತರ ಏಪ್ರಿಲ್‌ನಲ್ಲಿ ಕಬ್ಬಿಣ ಅದಿರು ರಫ್ತು ತೆರಿಗೆಯನ್ನು ಶೇ.10ರಿಂದ ಶೇ.15ಕ್ಕೆ ಏರಿಕೆ ಮಾಡಿತ್ತು.